fbpx
ಸಮಾಚಾರ

“ಉದ್ದೇಶಪೂರ್ವಕವಾಗಿಯೇ ಧೋನಿ ಭಾರತವನ್ನು ಸೋಲಿಸಿದ್ದಾರೆ” ಯೋಗರಾಜ್ ಸಿಂಗ್ ಆರೋಪ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಮಗದೊಮ್ಮೆ ಗಂಭೀರ ಆರೋಪ ಮಾಡಿರುವ ಯುವರಾಜ್ ಸಿಂಗ್ ಅಪ್ಪ ಯೋಗರಾಜ್ ಸಿಂಗ್, ಏಕದಿನ ವಿಶ್ವಕಪ್ ಸೋಲಿಗೆ ಧೋನಿಯೇ ಕಾರಣ ಎಂದಿದ್ದಾರೆ. ಸದಾ ಧೋನಿ ವಿರುದ್ಧ ಕಿಡಿ ಕಾರುವ ಯೋಗರಾಜ್ ಸಿಂಗ್ ಈಗ ಧೋನಿ ಉದ್ದೇಶ ಪೂರ್ವಕವಾಗಿಯೇ ಸೋಲಲು ಕಾರಣರಾದರು ಎಂದು ಆರೋಪಿಸಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದ ಭಾರತ ವಿಶ್ವಕಪ್‌ನಿಂದಲೇ ಹೊರನಡೆದಿತ್ತು. ಕೊನೆಯ ಹಂತದಲ್ಲಿ ಧೋನಿ ಹಾಗೂ ರವೀಂದ್ರ ಜಡೇಜಾ ಪ್ರತಿರೋಧವೊಡ್ಡಿ ಬ್ಯಾಟಿಂಗ್ ನಡೆಸಿದ್ದರೂ ಭಾರತಕ್ಕೆ ಗೆಲುವು ಸಿಗಲಿಲ್ಲ. ಹಾಗಾಗಿ ಕೇವಲ 18 ರನ್ ಅಂತರದಲ್ಲಿ ಭಾರತ ಸೋಲನುಭವಿಸಿತ್ತು.

ಸೆಮಿಫೈನಲ್‌ನಲ್ಲಿ ಬೇಕೆಂತಲೇಮಹೇಂದ್ರ ಸಿಂಗ್ ಧೋನಿ ಭಾರತವನ್ನು ಸೋಲಿಸಿದ್ದಾರೆ. ಯಾಕೆಂದರೆ ಮಗದೊಬ್ಬ ಭಾರತೀಯ ವಿಶ್ವಕಪ್ ಟ್ರೋಫಿ ಎತ್ತುವುದು ಧೋನಿಗೆ ಇಷ್ಟವಿರಲಿಲ್ಲ. ಬೇರೆಯವರಿಗೆ ಹೆಸರು ಬರುವುದನ್ನು ಧೋನಿ ಸಹಿಸುವುದಿಲ್ಲ ಹಾಗಾಗಿ ಧೋನಿ ಟೂರ್ನಿಯುದ್ದಕ್ಕೂ ನಿಧಾನಗತಿಯ ಆಟವನ್ನು ಆಡಿದರು. ಅಲ್ಲದೆ ಸೆಮಿಫೈನಲ್ ನಲ್ಲಿ ದೊಡ್ಡ ಶಾಟ್ ಆಡುವಂತೆ ಜಡೇಜಾರನ್ನು ಪ್ರಚೋದಿಸುತ್ತಿದ್ದರು. ಇಷ್ಟು ವರ್ಷ ಕ್ರಿಕೆಟ್ ಆಡಿ ಹೇಗೆ ಆಡಬೇಕೆಂಬುದು ಗೊತ್ತಿಲ್ಲವೇ ಎಂದು ಯೋಗರಾಜ್ ಪ್ರಶ್ನಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top