fbpx
ಸಮಾಚಾರ

ಟಿಕ್‍ಟಾಕ್ ಹುಚ್ಚಾಟಕ್ಕೆ ಇಬ್ಬರು ಯುವಕರು ಪೊಲೀಸ್ ವಶಕ್ಕೆ

ಒಂದು ಸಮಾಜದ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಯುವಕರನ್ನು ಸೋಮವಾರ ಬಂಧಿಸಲಾಗಿದೆ. ನಾಗರಾಳ ಎಸ್‌.ಪಿ.ಗ್ರಾಮದ ಯಲ್ಲಪ್ಪ ಯಮನಪ್ಪ ಹಳಬರ(19) ಹಾಗೂ ಬೀರಪ್ಪ ಭರಮಪ್ಪ ಜಕ್ಕಲಿ(21)ಬಂಧಿತರು.

ಯುವಕರಿಬ್ಬರು ನಾಗರಾಳ ಎಸ್‍ಪಿ ಗ್ರಾಮ ನಿವಾಸಿಗಳಾಗಿದ್ದು, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಅವಮಾನ ಮಾಡಿದ ರೀತಿಯಲ್ಲಿ ಟಿಕ್‍ಟಾಕ್ ಮಾಡಿದ್ದರು. ಅಷ್ಟೇ ಅಲ್ಲದೇ ಯಲ್ಲಪ್ಪ ಒಂದು ಸಮುದಾಯದ ಭಾವನೆ ಕೆರಳಿಸುವ ತರಹ ಟಿಕ್‍ಟಾಕ್ ಮಾಡಿ ಅದನ್ನು ವಾಟ್ಸಪ್ ಸ್ಟೇಟಸ್‍ಗೆ ಇಟ್ಟುಕೊಂಡಿದ್ದನು.

ಧಾರ್ಮಿಕ ಮುಖಂಡರಿಗೆ ಅವಮಾನ ಆಗುವ ಸ್ಟೇಟಸ್ ಹಾಕಬೇಡಿ ಎಂದು ಸ್ಥಳೀಯರು ತಿಳಿ ಹೇಳಿದ್ದರು. ಆದರೂ ಇಬ್ಬರು ಹಿರಿಯರ ಮಾತನ್ನು ಕೇಳಿರಲಿಲ್ಲ. ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿ ಪ್ರತಿಕೂಲ ವಾತಾವರಣ ನಿರ್ಮಾಣವಾಗಿತ್ತು. ಎರಡು ಸಮಾಜದ ಜನರು ಪೊಲೀಸ್‌ ಠಾಣೆಯ ಹತ್ತಿರ ಜಮಾಯಿಸಿದ್ದರು.

ಸ್ಥಳೀಯ ಠಾಣೆಯಲ್ಲಿ ಮಹಾಗುಂಡಪ್ಪ ದಂಡಿನ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಗ್ರಾಮಕ್ಕೆ ಸಿಪಿಐ ಕೆ.ಎಸ್‌.ಹಟ್ಟಿ, ಪಿಎಸೈ ಬಿ.ಬಿ.ಲಮಾಣಿ ಭೇಟಿ ನೀಡಿ ಮಾಹಿತಿ ಪಡೆದು, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top