fbpx
ಸಮಾಚಾರ

ಅಮ್ಮ ಆಗ್ತಿದ್ದಾರೆ ಶ್ರುತಿ ಹರಿಹರನ್- ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಿಹಿ ಸುದ್ದಿ ಹಂಚಿಕೊಂಡ ನಟಿ.

ಕನ್ನಡ ಚಿತ್ರನಟಿ ಶ್ರುತಿ ಹರಿಹರನ್ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಸದ್ಯ ನಟಿ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಅವರೇ ಸ್ವತಃ ತಮ್ಮ ಫೇಸ್ ಬುಕ್, ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಲವುದಿನಗಳ ಹಿಂದೆ ಶ್ರುತಿ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದ್ರೆ ಈ ಬಗ್ಗೆ ಶ್ರುತಿ ಎಲ್ಲೂ ಸ್ಪಷ್ಟಪಡಿಸಿರಲಿಲ್ಲ. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದಾರೆ.

 

 

 

ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನನ್ನು ಕಾಣಲು ನಿನ್ನ ತಂದೆ ರಾಮ್ ಕಳಾರಿ ಸಹ ಉತ್ಸುಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರ “ಹ್ಯಾಪಿ ನ್ಯೂ ಇಯರ್” ನಂತರ ಶ್ರುತಿ ಹರಿಹರನ್-ರಾಮ್ ಅವರ ವಿವಾಹವಾಗಿತ್ತು. ಇಬ್ಬರೂ ಹೆಚ್ಚು ಸದ್ದು ಗದ್ದಲವಿಲ್ಲದೆ ವಿವಾಹವಾಗಿದ್ದು 2017ರ ನವೆಂಬರ್ ನಲ್ಲಿ ಜಾಲತಾಣವೊಂದರ ವರದಿ ಮೂಲಕ ಬಹಿರಂಗವಾಗಿತ್ತು. ಕೇರಳದಲ್ಲಿ ನೃತ್ಯ ಮಾಸ್ಟರ್ ಆಗಿರುವ ರಾಮ್ ಅಲ್ಲಿನ ಪ್ರಸಿದ್ದ ಸಮರ ಕಲೆ ಕಲರಿ ಪಟ್ಟು ಕಲಾವಿದರಾಗಿ ಅಂತರಾಷ್ಟ್ರೀಯ ಮನ್ನಣೆ ಗಿಟ್ಟಿಸಿದ್ದಾರೆ.

ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top