fbpx
ಸಮಾಚಾರ

ಜುಲೈ 16 ನೇ ತಾರೀಖು ಬರುವಂತ ಕೇತುಗ್ರಸ್ತ ಚಂದ್ರ ಗ್ರಹಣ ಕುಂಭ ಹಾಗೂ ಮೀನ ರಾಶಿಯವರ ಮೇಲೆ ಯಾವ ಒಳ್ಳೆ ಹಾಗೂ ಘೋರ ರೀತಿಯ ಪರಿಣಾಮ ಬೀರುತ್ತೆ ಅಂತ ತಪ್ಪದೆ ತಿಳ್ಕೊಳ್ಳಿ.

ಈ ಶತಮಾನದ ಸುದೀರ್ಘಾವಧಿಯ  ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣದ ಕುಂಭ ರಾಶಿಯ ಭವಿಷ್ಯ .

ಇದೇ ಜುಲೈ ತಿಂಗಳು 16 ನೇ ತಾರೀಖಿನಂದು ಕೇತುಗ್ರಸ್ಥ  ಚಂದ್ರ ಗ್ರಹಣ ಪ್ರಾರಂಭವಾಗಲಿದ್ದು, ಕುಂಭ ರಾಶಿಯವರ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

 

 

ಕುಂಭ ರಾಶಿಗೆ ಕೇತುಗ್ರಸ್ತ ಚಂದ್ರ ಗ್ರಹಣ ವ್ಯಯ ಭಾವದಲ್ಲಿ ಜರುಗುತ್ತಿದೆ .ವ್ಯಯಭಾವ 12ನೇ ಭಾವ. ಈಗಾಗಲೇ  ಕುಜ ಕೇತುಗಳು ಇದೇ ಭಾವದಲ್ಲಿ ಈಗಾಗಲೇ ನಿಮಗೆ ತುಂಬಾ ಕಷ್ಟಗಳನ್ನು ತಂದೊಡ್ಡಿದ್ದಾರೆ. ಆದ್ದರಿಂದ ಈ ಗ್ರಹಣದ ಫಲಗಳು ಮಕರ ರಾಶಿಯಂತೆ ನಿಮಗೂ ಕೂಡ ಅನಿಷ್ಠವಾಗಿಯೇ ಸಿಗಲಿವೆ. ಅಶುಭ ಫಲಗಳು ಈ ಗ್ರಹಣದ ಮುಖಾಂತರ ನಿಮಗೆ ಸಿಗಲಿವೆ. ಈ ಗ್ರಹಣವು ಮುಖ್ಯವಾಗಿ ನಿಮಗೆ ಶತ್ರುಗಳ ಭಯವನ್ನು ನೀಡಲಿದೆ. ಶತ್ರುಗಳ ಕಾಟ ಹೆಚ್ಚಾಗಲಿದೆ.ನಿಮ್ಮ  ಚಟುವಟಿಕೆಗಳ ಮೇಲೆ ನಿಮ್ಮ ಶತ್ರುಗಳು ಗುಪ್ತವಾಗಿ  ಹದ್ದಿನ ಕಣ್ಣನ್ನು ಇಟ್ಟಿದ್ದಾರೆ .

ಏಕಾದಶ ಅಥವಾ ಲಾಭ ಭಾವದಲ್ಲಿ ಇರುವ ಶನೈಶ್ವರನು ಧನ ಲಾಭವನ್ನು ನಿಶ್ಚಿತವಾಗಿಯೂ ನೀಡಲಿದ್ದಾನೆ.6 ರಲ್ಲಿ ಇರುವ ರಾಹು ಶನೈಶ್ವರನಿಗೆ ಸಹಕರಿಸುತ್ತಾ ನಿಮ್ಮ ಐಶ್ವರ್ಯದಲ್ಲಿ ವೃದ್ಧಿಯನ್ನು ಉಂಟುಮಾಡುತ್ತಿದ್ದಾನೆ. ಆದರೂ ಕೂಡ ಈ ರಾಹುವು ಶನೈಶ್ವರನು ಶತ್ರುಗಳನ್ನು ನಾಶ ಮಾಡುತ್ತಿದ್ದಾನೆ.ಶನಿ , ರಾಹು  ಜೊತೆ ಸೇರಿ ನಿಮ್ಮ ಹಲವಾರು ಶತ್ರುಗಳನ್ನು ನಾಶ ಮಾಡಿದ್ದರು ಕೂಡ ಕೆಲವು ಗುಪ್ತ ಶತ್ರುಗಳು ಅವರಿಬ್ಬರ ಹಿಡಿತದಿಂದ ಜಾರಿಕೊಳ್ಳುತ್ತಾರೆ.

ಆದರೂ ಕೆಲವು ಶತ್ರುಗಳಿಗೆ ದೈವಬಲ ಇರುವ ಕಾರಣ ಅವರ ಮುಂದೆ ಈ ಶನಿ ರಾಹುಗಳ ಆಟ ನಡೆಯಲಾಗುವುದಿಲ್ಲ . ಅವರೇ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಮಾಡುತ್ತಾರೆ . ನಿಮ್ಮ ಬಂಡಾಯ ಸ್ವಭಾವದ ಕಾರಣ ನಿಮ್ಮ ಕುಟುಂಬದಿಂದ ನೀವು ದೂರ ಪ್ರದೇಶದಲ್ಲಿ ವಾಸ ಮಾಡಬೇಕಾಗುತ್ತದೆ.

ಅಕ್ಟೋಬರ್ 2019, 11 ನೇ ತಾರೀಖಿನಂದು  ನೀವು ಗುರು ಬಲವನ್ನು ಕಳೆದು ಕೊಳ್ಳುತ್ತೀರಿ. ನೀವು ಗುರು ಬಲದಿಂದ ವಂಚಿತರಾಗುತ್ತೀರಿ. ಕಳೆದ ಹಲವಾರು ತಿಂಗಳಿನಿಂದ ಅದೃಷ್ಟವೂ ನಿಮ್ಮನ್ನು  ಬೆಂಬಲಿಸುತ್ತಲೇ ಬಂದಿತ್ತು. ಆದರೆ ಗುರುಬಲವನ್ನು ಕಳೆದುಕೊಳ್ಳುವ ಮುಖಾಂತರ ಅದೃಷ್ಟದ ಬಾಗಿಲು ಮುಚ್ಚಿಕೊಳ್ಳುತ್ತದೆ. ನೀವು ನಿಮ್ಮದೇ ಆದ ಭ್ರಮೆಯಲ್ಲಿ ಇರುತ್ತಲೇ ಇರುತ್ತೀರಿ.ಒಂದು ಕಾಲ್ಪನಿಕ ಲೋಕವನ್ನು ನಿಮ್ಮ ಸುತ್ತ ಮುತ್ತ ನೀವೇ ರಚನೆ ಮಾಡಿಕೊಂಡಿದ್ದೀರಿ.

ಅಹಂಕಾರ ಮತ್ತು ಗರ್ವದಿಂದ ವರ್ತಿಸಿದರೆ ಶನೈಶ್ವರನು  ಕೂಡ ನಿಮಗೆ ಸಹಕಾರ ನೀಡುವುದಿಲ್ಲ. ಮಾರ್ಚ 2020 ರ ನಂತರ ರಾಹು ಕೂಡ ನಿಮ್ಮ ದಾರಿಯನ್ನು ತಪ್ಪಿಸಲಿದ್ದಾನೆ.ಪಿತ್ತ ರೋಗದಿಂದ ತುಂಬಾ ಬಲಳುತ್ತೀರಿ.ಅಷ್ಟೇ ಅಲ್ಲದೆ ಸ್ವಲ್ಪ ಚರ್ಮರೋಗಗಳು ನಿಮ್ಮನ್ನು ಕಾಡಲಿವೆ.ಆಗಾಗ್ಗೆ ಮೈ ತುರಿಸುವುದು ಮೈ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಏಳುವುದು ,ಕಾಣಿಸುವುದು ಸಾಮಾನ್ಯವಾಗಿದೆ. ಮತ್ತು ಸಂಬಂಧವಿಲ್ಲದ ,ಸೂತ್ರವಿಲ್ಲದ ವ್ಯಕ್ತಿಗಳೊಡನೆ ವಿನಾಕಾರಣ ಸಂಪರ್ಕವನ್ನು ಬೆಳೆಸಲು ಹೋಗಬೇಡಿ. ಅದರಿಂದ ದೊಡ್ಡ ಸಂಕಟಕ್ಕೆ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ.

ಅಂತಹ ವ್ಯಕ್ತಿಯ ಕಾರಣ ಮಾರ್ಚ 2020 ರ ಒಳಗೆ ವಂಚನೆಗೆ ಒಳಗಾಗುತ್ತೀರಿ.ಎಲ್ಲರಿಗೂ ಭ್ರಮೆಯನ್ನು ಉಂಟು ಮಾಡಲು ಹೋಗಿ ಈ ಬಾರಿ ನೀವೇ ಭ್ರಮೆಯಲ್ಲಿ ಬೀಳುತ್ತೀರಿ. ಭ್ರಮೆಯಲ್ಲಿ ಸಿಲುಕಿ ಹಾಕಿ ಹಾಕಿಕೊಳ್ಳುತ್ತೀರಿ.ಬಸ್ಮಾಸುರನಂತೆ ನಿಮ್ಮ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ನಿಮ್ಮ ತಲೆಯ ಮೇಲೆ ನೀವೇ ಕೈ ಇಟ್ಟುಕೊಳ್ಳುವ ಪ್ರಸಂಗ ಒದಗಿ ಬರಲಿದೆ. ಹೀಗಾಗಿ ಎಚ್ಚರದಿಂದ ಇದ್ದರೆ ಒಳ್ಳೆಯದು.ಪರದ್ರವ್ಯ,ಪರ ಧನ,ಪರ ಪತ್ನಿ,ಪರ ಪುರುಷ,ಇವುಗಳ ಹಿಂದೆ ಬಿದ್ದರೆ ನಿಮಗೆ ಸಂಕಟ  ನಿಶ್ಚಿತವಾಗಿಯೂ ಇರುತ್ತದೆ.

ರಾಜನೊಡನೆ ಸ್ನೇಹ ಮಾಡಿದರೆ ರಾಜನಾಗಲು ಸಾಧ್ಯವಿಲ್ಲ, ಜ್ಞಾನಿಯೊಡನೆ ಸಂಪರ್ಕ ಬೆಳೆಸಿದರೆ,  ಜ್ಞಾನಿಯೊಂದಿಗೆ ತಿರುಗಾಡಿದರೆ ಜ್ಞಾನಿಯಾಗಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಅಸ್ತಿತ್ವವನ್ನು ನೀವೇ ಉಳಿಸಿಕೊಳ್ಳುವ ಅಥವಾ ನಿರ್ಮಾಣ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಇನ್ನೊಬ್ಬರ ಪರಿಸ್ಥಿತಿಯ ಆಧಾರದ  ಮೇಲೆ ಅವರೊಡನೆ ಮಾಡಿದ ಸ್ನೇಹದ ಮೇಲೆ ನಿಮ್ಮ ಅಸ್ತಿತ್ವ ಅಥವಾ ನಿಮ್ಮ ಭವಿಷ್ಯ ನಿರ್ಮಾಣವಾಗುವುದಿಲ್ಲ.

ಪರಿಹಾರ.

ಕಾಲ ಬೈರಾವಾಷ್ಟಕವನ್ನು ಪ್ರತಿದಿನ ಪಠಿಸಬೇಕು ಭಯ ನಿವಾರಣೆಗಾಗಿ . ಅಷ್ಟಾವಕ್ರ ಗೀತೆಯನ್ನು ಅಷ್ಟಾವಕ್ರ ಋಷಿಗಳು ಈ ಮಿಥಿಲಾ ನರೇಶನಾದ ಜನಕರಾಜನಿಗೆ  ಬೋಧಿಸಿದ್ದರು ಇದನ್ನು ಪಠಿಸಬೇಕು.

ಈ ಶತಮಾನದ ಸುದೀರ್ಘ ಅವಧಿಯ ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣದ ಮೀನ ರಾಶಿಯ ಭವಿಷ್ಯ .

ಜುಲೈ 27 ನೇ ತಾರೀಖಿನಂದು ರಾತ್ರಿ ಶುಕ್ರವಾರ ಚಂದ್ರಗ್ರಹಣವು ಪ್ರಾರಂಭವಾಗಲಿದ್ದು 28 ನೇ ತಾರೀಖಿನಂದು ಕೂಡ ಇರಲಿದೆ ರಾಶಿಯ ಮೇಲೆ ಯಾವ ರೀತಿಯ ಪ್ರಭಾವವನ್ನು ಉಂಟು ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

 

 

 

ಮೀನ ರಾಶಿಯು ಕಾಲಪುರುಷನ ಮೋಕ್ಷ ರಾಶಿ ಮತ್ತು ಕೊನೆಯ ರಾಶಿಯಾಗಿದ್ದು, ಇದು ಒಂದು ದ್ವಿಸ್ವಭಾವ ರಾಶಿಯಾಗಿದ್ದು , ನಿಮ್ಮ ರಾಶಿಗೆ ಈ ಜುಲೈ 28 ನೇ ತಾರೀಖಿನಂದು ನಡೆಯುವ ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣ ಏಕಾದಶ ಭಾವದಲ್ಲಿ ಸಂಭವಿಸುತ್ತದೆ.ಏಕಾದಶ ಭಾವ ಲಾಭ ಭಾವ ಆದ್ದರಿಂದ ಈ ಏಕಾದಶ ಭಾವ ತುಂಬಾ ಶುಭ ಫಲವನ್ನು ನೀಡಲಿದೆ ಮತ್ತು ಈ ಗ್ರಹಣದಿಂದ ನಿಮಗೆ ಲಾಭವಾಗಲಿದೆ.

ಮಿತ್ರರಿಂದ ತುಂಬಾ ಸಹಾಯ ಮತ್ತು ಸಹಕಾರ ಲಭಿಸಲಿದೆ, ಸಹೋದ್ಯೋಗಿಗಳಿಂದ ನಿಮಗೆ ಲಾಭವಾಗಲಿದೆ.ಸಮಾಜದಲ್ಲಿ ನಿಮಗೆ ಕೀರ್ತಿ,ಪ್ರತಿಷ್ಠೆ, ಗೌರವ, ಸನ್ಮಾನಗಳು ಹೆಚ್ಚಾಗಲಿವೆ. ಅಷ್ಟೇ ಅಲ್ಲದೆ ನಿಮ್ಮ ಪೂರ್ವ ಸಂಚಿತ ಕರ್ಮದ ಫಲಗಳು ಈಗ ನಿಮಗೆ ಲಭಿಸುತ್ತಿವೆ. ಅಷ್ಟೇ ಅಲ್ಲದೆ ಜೇಷ್ಠ ಸಹೋದರ ಅಥವಾ ಜೇಷ್ಠ ಸಹೋದರಿಯರಿಂದ ನಿಮಗೆ ಲಾಭವಾಗಲಿದೆ ಮತ್ತು ಅವರ ಜೀವನದಲ್ಲಿಯೂ ಕೂಡ ಅವರು ಕೂಡ ಉನ್ನತಿಯನ್ನು ಮತ್ತು ಅಭಿವೃದ್ಧಿಯನ್ನು ಕಾಣುತ್ತಾರೆ. ಜೀವನದಲ್ಲಿ ಅವರಿಗೂ ಕೂಡ ಶುಭವಾಗಲಿದೆ ಒಂದು ಉನ್ನತ ಹಂತಕ್ಕೆ ನಿಮ್ಮ ಜ್ಯೇಷ್ಠರು ತಲುಪುತ್ತಾರೆ .

ಪಂಚಮದಲ್ಲಿ ಇರುವ ರಾಹು ದೂರದ ಸಂಬಂಧಿಯೊಬ್ಬರು ಬಗ್ಗೆ ಆಶುಭ ವಾರ್ತೆಯನ್ನು ನೀಡಲಿದ್ದಾರೆ. ಇದರಿಂದ ದೂರದ ಸಂಬಂಧಿಯೊಬ್ಬರ ಬಗ್ಗೆ ಅಶುಭ ವಾರ್ತೆಯು ಕೇಳಿ ಬರಲಿದೆ. ಹನ್ನೊಂದರಲ್ಲಿರುವ ಕೇತು ಮಾತ್ರ ನಿಮ್ಮ ಕೀರ್ತಿ ಪತಾಕೆಯನ್ನು ನಾಲ್ಕು ದಿಕ್ಕುಗಳಲ್ಲಿಯೂ ಕೂಡ ಪಸರಿಸಲಿದ್ದಾನೆ. ದಶಮದಲ್ಲಿರುವ ಶನಿಯು  ನಿಮ್ಮ ಮನಸ್ಸಿನಲ್ಲಿ ಆಗಾಗ ವಿಷವನ್ನು ಬಿತ್ತುತ್ತಿದ್ದಾನೆ. ಆದ್ದರಿಂದ ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಮನಸ್ಸಿನ ಸ್ಥಿತಿ ದುರ್ಮನಸ್ಥಿತಿ ಇರುತ್ತದೆ. ಆಗಾಗ ಮನಸ್ಸು ವಿಷಮಯವಾಗುತ್ತದೆ. ಆದರೂ ಕೂಡ ಈ ದಶಮದ ಶನೈಶ್ವರನು ನಿಮಗೆ ಧನ ಲಾಭವನ್ನು ನೀಡುತ್ತಾನೆ ಅದೇ ರೀತಿ ಧನ ಹಾನಿಯನ್ನು ಕೂಡ ಸರಿ ಸಮಾನವಾಗಿ ನೀಡುತ್ತಾನೆ.

ಇದುವರೆಗೂ ಅಷ್ಟಮದ ಗುರು ಅತ್ಯಂತ ಮೃತ್ಯು ಪೀಡೆಯನ್ನು ನೀಡಿದ್ದನು.ಆದರೆ ಅಕ್ಟೋಬರ್ 2019 11 ನೇ ತಾರೀಖಿನ ನಂತರ ಈ ಗುರು ನಿಮ್ಮ ಭಾಗ್ಯ ಭಾವದಲ್ಲಿ ಸಂಚರಿಸಲಿದ್ದಾನೆ.ಈ ಗುರು ಬೇರೆ ಯಾರು  ಅಲ್ಲ ನಿಮ್ಮ ರಾಶಿಯ ಅಧಿಪತಿ. ರಾಶ್ಯಾಧಿಪತಿ ದಶಮಾಧಿಪತಿಯಾಗಿ  ಭಾಗ್ಯ ಭಾವದಲ್ಲಿ ಸಂಚರಿಸಲಿದ್ದಾನೆ,ಹೀಗೆ ಸಂಚರಿಸುವ ಕಾರಣ ಈ ಗುರು ನಿಮಗೆ ಮೃತ್ಯು ಪೀಡೆಯಿಂದ ಹೊರಗೆ ತೆಗೆದು ನಿಮಗೆ ಸೌಖ್ಯವನ್ನು ನೀಡಲಿದ್ದಾನೆ. ಗುರುಬಲ  ಮತ್ತು ಅದೃಷ್ಟಗಳು ನಿಮ್ಮನ್ನು ತುಂಬಾ ಬೆಂಬಲಿಸಲಿವೆ.ಗುರು ಕೇತುಗಳು ಬಲ ನಿಮ್ಮ ಜ್ಞಾನವನ್ನು ವೃದ್ಧಿಗೊಳಿಸಲಿವೆ,. ಅಪಾರ ಪ್ರಮಾಣದ ಜ್ಞಾನ, ವಿಜ್ಞಾನ-ತಂತ್ರಜ್ಞಾನದ ರಹಸ್ಯಗಳನ್ನು ನೀವು ತಿಳಿದುಕೊಳ್ಳುತ್ತೀರಿ . ನಿಮ್ಮ ಮುಖದಲ್ಲಿ ಒಂದು ರೀತಿಯ ಕಳೆ ಬರಲಿದೆ. ಉನ್ನತ ಶಿಕ್ಷಣದಲ್ಲಿ ನಿಶ್ಚಿತವಾಗಿಯೂ ಯಶಸ್ಸನ್ನು ಕಾಣುತ್ತೀರಿ.

ಪರಿಹಾರ .

ಗುರುಗಳ ಆರಾಧನೆ ಮಾಡಿ ಮತ್ತು ಶ್ರೀ ದತ್ತಾತ್ರೇಯ ವಿರಚಿತ ಅವಧೂತ ಗೀತ ಎಂಬ ಪುಸ್ತಕವನ್ನು ಓದಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top