fbpx
ಸಮಾಚಾರ

ಡೆಲ್ಲಿಯ ಸಂಸತ್ ನಲ್ಲೂ ಧ್ವನಿಸಿದ #KarnatakaJobsForKannadigas

ಪ್ರಸ್ತುತ ವಿದೇಶಾಂಗ ರಾಜ್ಯ ಸಚಿವ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮತ್ತು ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ವಿ .ಮುರಳೀಧರನ್ ನಾಳೆ ಈ ವಿಷಯವಾಗಿ ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾಗಿರುವ
ರವಿಶಂಕರ್ ಪ್ರಸಾದ್ ದಕ್ಷಿಣ ಭಾರತೀಯರಿಗೆ ಅವರ ಉದ್ಯೋಗ ಕೈತಪ್ಪಿರುವ ಅನ್ಯಾಯದ ವಿಚಾರದ ಬಗ್ಗೆ ನಾಳೆ ಉತ್ತರಿಸಲಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಕರ್ನಾಟಕ ರಾಜ್ಯ ಸಂಸದರು ಜಿ.ಸಿ ಚಂದ್ರ ಶೇಖರ್, ಬಿ.ಕೆ ಹರಿಪ್ರಸಾದ್, ಎಲ್ .ಹನುಮಂತಯ್ಯ, ಪ್ರೊ ರಾಜೀವ್ ಗೌಡ ಮೊದಲಾದಂತೆ ಎಲ್ಲರು ಸೇರಿ ಇಡೀ ದಕ್ಷಿಣ ಭಾರತವೇ ಸ್ಥಳೀಯ ಉದ್ಯೋಗ ಸ್ಥಳೀಯರಿಗೆ ಸಿಗಲಿ ಎಂಬ ಒಕ್ಕೊರಲಿನ ಧ್ವನಿ ಎತ್ತಿದ್ದು ವಿಶೇಷ.

ಈ ವಿಷಯವಾಗಿ ರಾಜ್ಯಸಭಾ ಸಂಸದ ಜಿ.ಸಿ ಚಂದ್ರ ಶೇಖರ್ ಟ್ವೀಟ್ ಮಾಡಿದ್ದಾರೆ.

 

ಪ್ರಾದೇಶಿಕ ಭಾಷೆಗಳನ್ನು ಹೊರಗಿಟ್ಟು ನೇಮಕಾತಿ ಪರೀಕ್ಷೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಇಟ್ಟುಕೊಳ್ಳುವ ನಿರ್ಧಾರವನ್ನು ಅಂಚೆ ಇಲಾಖೆ ಕೈಗೊಂಡಿತ್ತು.

ಪೋಸ್ಟ್‌ಮೆನ್ ಮತ್ತು ಇತರ ನಾಲ್ಕು ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಆಯ್ಕೆಯನ್ನು ಅಂಚೆ ಇಲಾಖೆ ತೆಗೆದುಹಾಕಿದೆ. ಅಂಚೆ ಇಲಾಖೆಯ ನೇಮಕಾತಿಗೆ ನಡೆಯುವ ಪರೀಕ್ಷೆಗಳು ಈಗ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇರಲಿವೆ ಎಂದು ಇಲಾಖೆ ಅಧಿಸೂಚನೆ ಹೊರಡಿಸಿಸಿದೆ.

ಕಳೆದ ವರ್ಷದವರೆಗೆ ಯಾವುದೇ 15 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿತ್ತು. ಇವುಗಳಲ್ಲಿ ದಕ್ಷಿಣ ರಾಜ್ಯಗಳ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿವೆ. ಜುಲೈ 11 ರಂದು ಬಿಡುಗಡೆಯಾದ ಪರಿಷ್ಕೃತ ಪರೀಕ್ಷಾ ಮಾದರಿಯನ್ನು ಉದ್ಯೋಗ ಆಕಾಂಕ್ಷಿಗಳು ಖಂಡಿಸಿದ್ದಾರೆ. ಕೊನೆಯ ನಿಮಿಷದ ಈ ನಿಯಮ ಬದಲಾವಣೆ ಮಾಡಲು ಕಾರಣವೇನು ಎಂಬುದನ್ನು ಅಂಚೆ ಇಲಾಖೆ ಎಲ್ಲಿಯೂ ಉಲ್ಲೇಖಿಸಿಲ್ಲ.

“ಈ ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಅಥವಾ ರಾಜ್ಯದ ಸ್ಥಳೀಯ ಭಾಷೆಯಲ್ಲಿರುತ್ತವೆ” ಎಂದು ಮೇ 16 ರ ಅಧಿಕೃತ ಅಧಿಸೂಚನೆಯಲ್ಲಿ ಹೊರಡಿಸಲಾಗಿತ್ತು. ಆದಾಗ್ಯೂ, ಇಲಾಖೆ ಜುಲೈ 11 ರಂದು ಪರೀಕ್ಷಾ ಮಾದರಿಯನ್ನು ಪರಿಷ್ಕರಿಸಿತು, ಭಾಷಾ ಆಯ್ಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತಗೊಳಿಸಿ ಪ್ರಾದೇಶಿಕ ಭಾಷಿಕರ ಕೆಂಗಣ್ಣಿಗೆ ಗುರಿಯಾಗಿದೆ.

“ಕರ್ನಾಟಕದ ಖಾಲಿ ಹುದ್ದೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿವೆ. ಹಳ್ಳಿ ಜನರಿಗೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡಲು ಬಹುತೇಕರಿಗೆ ಬಾರದಿರುವುದರಿಂದ ನೌಕರರು ಕನ್ನಡದಲ್ಲಿ ಸಂವಹನ ಮಾಡಬೇಕಾಗುತ್ತದೆ. ಈ ಹೊಸ ನಿಯಮದಿಂದ ಹಿಂದಿ ಮಾತನಾಡುವ ಜನರು ಕರ್ನಾಟಕದಲ್ಲಿ ಅಂಚೆ ಇಲಾಖೆ ಉದ್ಯೋಗಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ.

ಕೇಂದ್ರ ಸಂವಹನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯ ನಡೆಸುವ ಪರೀಕ್ಷೆಯಲ್ಲಿ ಮೂರು ಪತ್ರಿಕೆಗಳಿವೆ. ನೇಮಕಾತಿಗಾಗಿ ಮೆರಿಟ್ ಪಟ್ಟಿ ಪೇಪರ್- I ನಲ್ಲಿನ ಸ್ಕೋರ್ ಅನ್ನು ಮಾತ್ರ ಆಧರಿಸಿರುತ್ತದೆ. ಮತ್ತು ಇತರ ಎರಡು ಅರ್ಹತಾ ಪರೀಕ್ಷೆಗಳಾದ ಡೇಟಾ ಎಂಟ್ರಿ ಕೌಶಲ್ಯ ಪರೀಕ್ಷೆ (ಪೇಪರ್ -3) ಹೊರತುಪಡಿಸಿ ಮತ್ತು ಇತರ ಪತ್ರಿಕೆಗಳು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ಆದರೆ ಪೇಪರ್-1 ನಲ್ಲಿ ಕೇಳಲಾಗುವ ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಅಥವಾ ರಾಜ್ಯದ ಸ್ಥಳೀಯ ಭಾಷೆಯಲ್ಲಿರುತ್ತವೆ” ಎಂದು ಮೇ 16 ರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದಾಗ್ಯೂ, ಇಲಾಖೆ ಜುಲೈ 11 ರಂದು ಪರೀಕ್ಷಾ ಮಾದರಿಯನ್ನು ಪರಿಷ್ಕರಿಸಿ ಭಾಷಾ ಆಯ್ಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತಗೊಳಿಸಲಾಗಿದೆ..”ಇದು ಸರಿಯಾದ ಕ್ರಮವಲ್ಲ” ಎಂದು ಅಖಿಲ ಭಾರತ ಅಂಚೆ ನೌಕರರ ಒಕ್ಕೂಟದ ಜೆ ರಾಮಮೂರ್ತಿ ಹೇಳಿದ್ದಾರೆ.

ಪರೀಕ್ಷೆಯನ್ನು ಅಥವಾ ಇಂಗ್ಲಿಷ್ ನಲ್ಲಿ ಮಾತ್ರವೇ ನಡೆಸಿದರೆ ಕರ್ನಾಟಕದಲ್ಲಿ ಇರುವ 1000ಕ್ಕೂ ಹೆಚ್ಚು ಅಂಚೆ ಉದ್ಯೋಗಗಳು ಕನ್ನಡಿಗರ ಕೈತಪ್ಪಲಿವೆ. ಕೇಂದ್ರಸರ್ಕಾರದ ಹಿಂದಿ ವ್ಯಾಮೋಹದಿಂದ ಕನ್ನಡಿಗರು ಉದ್ಯೋಗ ಕಳೆದುಕೊಂಡು ತಮಗೆ ಸಿಗಬೇಕಾದ ಕೆಲಸಗಳನ್ನು ಹಿಂದಿಗರಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.. ಸ್ಥಳೀಯರ ಹೊಟ್ಟೆ ಮೇಲೆ ಹೊಡೆದು ಪರರಾಜ್ಯದ ಹಿಂದಿಗರ ಉದ್ದಾರ ಮಾಡಲು ಹೊರಟಿರುವ ಕೇಂದ್ರದ ಈ ನಡೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

ನೇಮಕಾತಿಯಲ್ಲಿ ಹಗರಣ:

ಅರ್ಜಿದಾರರು 2016 ರಲ್ಲಿ ನಡೆದ ಇಲಾಖೆಯು ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ದುಷ್ಕೃತ್ಯಗಳು ಕಂಡುಬಂದಿವೆ ಎಂದು ಆರೋಪಿಸಿದ್ದಾರೆ. ಹರಿಯಾಣದಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ತಮಿಳು ಪತ್ರಿಕೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಇನ್ನು ಮಹಾರಾಷ್ಟ್ರ ಮತ್ತು ಪಂಜಾಬ್‌ನ ಅನೇಕ ಅಭ್ಯರ್ಥಿಗಳು ಹರಿಯಾಣದಲ್ಲಿ ನೋಂದಾಯಿಸಿಕೊಂಡಿದ್ದರು, ಮತ್ತು ಅವರೂ ತಮಿಳಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದರು. ಈ ವಿಷಯವನ್ನು ಕೇಂದ್ರ ತನಿಖಾ ದಳವು ಪರಿಶೀಲಿಸುತ್ತಿದೆ.

ಇನ್ನು IBPS ಪರೀಕ್ಷೆ ಯಲ್ಲೂ ಕನ್ನಡಿಗರಿಗೆ ಭಾರಿ ಅನ್ಯಾಯವಾಗಿದೆ :

ಕರ್ನಾಟಕದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕೆಂಬ ಕುರಿತಂತೆ ಕರ್ನಾಟಕದಾದ್ಯಂತ ಕನ್ನಡಪರ ಸಂಘಟನೆಗಳು ಹೋರಾಟಕ್ಕಿಳಿದು ವರ್ಷಗಳೇ ಕಳೆದಿವೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ ಎಂದು ಉದ್ಯೋಗಾಕಾಂಕ್ಷಿಗಳು ಅನೇಕ ಭಾರಿ ಹೋರಾಟಗಳನ್ನು ನಡೆಸಿದ್ದಾರೆ.. ಇಂಥಾ ಗಂಭೀರ ಸಮಸ್ಯೆಯ ಬಗ್ಗೆ ರಾಜ್ಯದ ಸಂಸದರು ಸಂಸತ್ ನಲ್ಲಿ ಮಾತನಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದವು. ಆದರೆ ಮೊನ್ನೆಯವರೆಗೂ ಯಾರೊಬ್ಬರೂ ಕೂಡ ಈ ಬಗ್ಗೆ ಧ್ವನಿಯೆತ್ತಿರಲಿಲ್ಲ.

ಹಿಂದೆ 2014ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ 2014ರ ನಂತರ ಬ್ಯಾಂಕಿಂಗ್ ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿತ್ತು ಆದ್ಯಾಗೂ ಮೊನ್ನೆ ನಿರ್ಮಲ ಸೀತಾರಾಮ್ 13 ಭಾಷೆಗಳಲ್ಲಿ ಮೈನ್ಸ್ ಪರೀಕ್ಷೆಯನ್ನು ಬರೆಯಬಹುದು ಎನ್ನುವ ತಿದ್ದು ಪಡಿಯನ್ನು ಇತ್ತೀಚಿಗಷ್ಟೇ ಮಾಡಲಾಗಿದೆ ಆದ್ರೆ ಪ್ರಿಲಿಮ್ನರಿ ಪರೀಕ್ಷೆ ಇನ್ನು ಹಿಂದಿ ಹಾಗು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇದ್ದು ಸ್ಥಳೀಯ ಭಾಷೆಯ ಜ್ಞಾನವಿರುವ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಪ್ರಾದೇಶಿಕ ಭಾಷೆಗಳ ರಾಜ್ಯಗಳು ಈ ಸಮಸ್ಯೆಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.

ಯಾರೊಬ್ಬರೂ ಕೂಡ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿದವರನ್ನು ಬೆಂಬಲಿಸಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ನಮ್ಮವರೇ ತಾತ್ಸಾರದ ಮನೋಭಾವನ್ನು ಹೊಂದಿರುವುದು ವಿಷಾದನೀಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top