fbpx
ಸಮಾಚಾರ

ಪೊಲೀಸರಿಗೆ ಸಿಹಿಸುದ್ದಿ -ಔರಾದ್ಕರ್ ವರದಿ ಜಾರಿಗೆ ಸಿಎಂ ಅಂಗೀಕಾರ.

ರಾಜಕೀಯ ಕ್ಷಿಪ್ರಕ್ರಾಂತಿಯ ನಡುವೆಯೂ ಪೊಲೀಸರಿಗೆ ಸಿಹಿ ಸುದ್ದಿ ದಕ್ಕಿದೆ. ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ಸಮಸ್ಯೆ ನಿವಾರಣೆಗೆ ಸರಕಾರ ಮುಂದಾಗಿದೆ. ಪೊಲೀಸರ ವೇತನ, ಸಮಸ್ಯೆ ನಿವಾರಣೆಗೆ ರಚಿಸಲಾಗಿದ್ದ ಔರಾದ್ಕರ್‌ ನೇತೃತ್ವದ ಸಮಿತಿ ಶಿಫಾರಸು ಜಾರಿಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಹಿ ಮಾಡಿದ್ದಾರೆ.

 

 

 

2016 ಜೂನ್ ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೇತನ ಪರಿಷ್ಕರಣೆ ಸಂಬಂಧ ಬೇಡಿಕೆ ಕೇಳಿಬಂದ ಕಾರಣ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ರಚಿಸಿತ್ತು. ಕೇರಳ, ಆಂಧ‍್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ವೇತನ ಆಧರಿಸಿ ರಾಜ್ಯ ಪೊಲೀಸರಿಗೆ ಶೇ.30 ರಷ್ಟು ವೇತನ ಹೆಚ್ಚಿಸುವಂತೆ ಗೃಹ ಸಚಿವರಾಗಿದ್ದ ಡಾ.ಪರಮೇಶ್ವರ್ ಅವರಿಗೆ ಸಮಿತಿ ವರದಿ ಸಲ್ಲಿಕೆ ಮಾಡಿತ್ತು.

ಆದರೆ ಇದಾದ ಮೇಲೆ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ರಾಜಕಾರಣದ ಬದಲಾವಣೆಗಳಾಗಿದ್ದವು. ಎಂ.ಬಿ.ಪಾಟೀಲ್ ಮೈತ್ರಿ ಸರ್ಕಾರದಲ್ಲಿ ಗೃಹಮಂತ್ರಿಯಾದ ಬಳಿಕ ಔರಾದ್ಕರ್ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದರು. ಇದೀಗ ಮೂಲ ವರದಿಯಲ್ಲಿ ಕೆಲ ಮಾರ್ಪಾಡುಗಳೊಂದಿಗೆ ಅಂತಿಮ ಒಪ್ಪಿಗೆ ನೀಡಲಾಗಿದೆ.

ಪರಿಷ್ಕೃತ ಮೂಲ ವೇತನ ವಿವರ
ಪೊಲೀಸ್ ಕಾನ್ಸ್​ಟೇಬಲ್ – ರಿಸರ್ವ್ ಕಾನ್ಸ್​ಟೇಬಲ್ – 23,500 ದಿಂದ 47,650
ಹೆಡ್ ಕಾನ್ಸ್​ಟೇಬಲ್ – 27,650 ದಿಂದ 52,650
ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ – 30,350 ದಿಂದ 58,250
ಇನ್ಸ್​ಪೆಕ್ಟರ್ – 43,100 ದಿಂದ 83,900
ಎಸ್​ಪಿ( ಐಪಿಎಸ್ ಹೊರತುಪಡಿಸಿ)-70,850 ದಿಂದ 1,07,100

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top