fbpx
ಸಮಾಚಾರ

ವಾಯುಸೇನೆಗೆ ಸೇರಲು ಸಜ್ಜಾದ ಮೃತ ಪೈಲಟ್ ಪತ್ನಿ.

ಮಿರಾಜ್‌ 2000 ತರಬೇತಿ ವಿಮಾನ ಹಾರಾಟ ವೇಳೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಪೈಲಟ್‌ ಸಮೀರ್‌ ಅಬ್ರೋಲ್‌ ಅವರ ಪತ್ನಿ ಗರೀಮಾ ಅಬ್ರೋಲ್‌ ಸದ್ಯವೇ ವಾಯುಪಡೆ ಸೇರಲಿದ್ದಾರೆ. ”ದೇಶ ಸೇವೆಯ ತುಡಿತದೊಂದಿಗೆ ವಾಯುಪಡೆ ಸೇರಿದ್ದೇನೆ,” ಎಂದು ಅವರು ಹೇಳಿದ್ದಾರೆ.

 

ಗರೀಮಾ ಅಬ್ರೋಲ್ ಅವರು ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ನಡೆಸಿದ ‘ಸರ್ವಿಸ್ ಸೆಲಕ್ಷನ್ ಬೋರ್ಡ್’ ಪ್ರವೇಶಾತಿ ಸಂದರ್ಶನದಲ್ಲಿ ಪಾಸಾಗಿದ್ದಾರೆ. ಅವರು ತೆಲಂಗಾಣದ ದುಂಡಿಗಲ್‍ನಲ್ಲಿರುವ ವಾಯುಪಡೆಯ ಅಕಾಡೆಮಿ ಮತ್ತು 2020ರ ಜನವರಿಯಲ್ಲಿ ಭಾರತೀಯ ವಾಯುಪಡೆಗೆ ಸೇರಲಿದ್ದಾರೆ. ಅಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಪರೀಕ್ಷಾರ್ಥ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಅಬ್ರೋಲ್‌ ಹಾಗೂ ಇನ್ನೊಬ್ಬ ಪೈಲಟ್‌ ಗಾಯಗೊಂಡಿದ್ದರು. ವಸತಿ ಪ್ರದೇಶದಿಂದ ಬೇರೆಡೆ ವಿಮಾನವನ್ನು ಡಿಕ್ಕಿ ಹೊಡೆಸುವ ಮೂಲಕ ನೂರಾರು ಜನರ ಪ್ರಾಣ ಉಳಿಸಿದ ಕೀರ್ತಿ ಸಮೀರ್‌ದ್ದಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top