fbpx
ಸಮಾಚಾರ

“ನಾನು ಚೆನ್ನಾಗಿಯೇ ಇದ್ದೇನೆ, ವದಂತಿಗಳನ್ನು ಕಿವಿಕೊಡಬೇಡಿ” ಎಂದ ದ್ವಾರಕೀಶ್

ನಟ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿದ್ದ ವದಂತಿಗಳಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ದ್ವಾರಕೀಶ್ ಅವರೇ ವೀಡಿಯೊ ಒಂದನ್ನು ರಿಲೀಸ್ ಮಾಡಿದ್ದು ತಮ್ಮ ಆರೋಗ್ಯ ಬಗ್ಗೆ ಅದರಲ್ಲಿ ಹೇಳಿದ್ದಾರೆ.

 

 

”ನಿಮ್ಮ ದ್ವಾರಕೀಶ್.. ಕರ್ನಾಟಕ ಕುಳ್ಳ.. ಆರೋಗ್ಯವಾಗಿ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸದಿಂದ ನಾನು ಚೆನ್ನಾಗಿ ಇದ್ದೇನೆ. ಮುಂದೆ ಚೆನ್ನಾಗಿ ಇರುತ್ತೇನೆ. ಎಲ್ಲವೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ. ನನಗೆ ಏನೂ ಆಗಿಲ್ಲ ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ” ಎಂದು ದ್ವಾರಕೀಶ್ ವಿಡಿಯೋದಲ್ಲಿ ಹೇಳಿದ್ದಾರೆ.

 

 

 

ದ್ವಾರಕೀಶ್ ಅವರಿಗೆ ಏನೋ ಆಗಿದೆ ಎಂಬ ಸುದ್ದಿಗಳು ಹಬ್ಬಿದ ಹಿನ್ನೆಲೆಯಲ್ಲಿ ನಿರ್ದೇಶಕ ಕೆ ಎಂ ಚೈತನ್ಯ ಸಹ ಟ್ವೀಟ್ ಮಾಡಿದ್ದಾರೆ. “ದ್ವಾರಕೀಶ್ ಸಾರ್ ಚೆನ್ನಾಗಿದ್ದಾರೆ. ದೇವರ ದಯೆ. ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ” ಎಂದಿದ್ದಾರೆ.

ಅಂದಹಾಗೆ ದ್ವಾರಕೀಶ್ ನಿಧನ ಹೊಂದಿದ್ದಾರೆ ಎನ್ನುವ ಸುಳ್ಳು ಸುದ್ದಿ ನಿನ್ನೆ (ಸೋಮವಾರ) ರಾತ್ರಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ವಾಟ್ಸ್ ಅಪ್ ನಲ್ಲಿ RIP ದ್ವಾರಕೀಶ್ ಸರ್ ಎನ್ನುವ ಪೋಸ್ಟ್ ಗಳು ಕಾಣುತ್ತಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top