fbpx
ಸಮಾಚಾರ

“ನನ್ನ ಕೊನೆಯುಸಿರು ಇರುವವರೆಗೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆ” ಬೆನ್ ಸ್ಟೋಕ್ಸ್!

ವಿಶ್ವಕಪ್ ಇತಿಹಾಸದಲ್ಲೇ ಅತ್ಯದ್ಭುತ ಫೈನಲ್ ಮೂಲಕ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ರೋಚಕ ಟೈ ಫಲಿತಾಂಶದಲ್ಲಿ ಅಂತ್ಯಕಂಡಿದೆ. ಇದರಂತೆ ಅತಿ ಹೆಚ್ಚು ಬೌಂಡರಿ (ಬೌಂಡರಿ ಹಾಗೂ ಸಿಕ್ಸರ್) ಗಳಿಸಿದ ತಂಡವೆಂಬ ಕಾರಣಕ್ಕಾಗಿ ಚೊಚ್ಚಲ ವಿಶ್ವಕಪ್‌ ಕಿರೀಟಕ್ಕೆ ಮುತ್ತಿಕ್ಕಿದೆ.

ಗೆಲುವಿನ ಬಳಿಕ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಬಳಿ ಇಂಗ್ಲೆಂಡ್ ಆಟಗಾರ ಸ್ಟೋಕ್ಸ್ ಕ್ಷಮೆ ಯಾಚಿಸಿದ್ದಾರೆ. “ತನಗೆ ಅರಿವಿಲ್ಲದಂತೆ ಈ ರೀತಿಯಾಗಿದೆ. ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಅದರೂ ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೇಳುತ್ತೇನೆ. ಮಾತನಾಡಲು ಪದಗಳೇ ಬರುತ್ತಿಲ್ಲ. ಶ್ರಮಪಟ್ಟು ಫೈನಲ್‌ಗೆ ಬಂದಿದ್ದೆವು. ಚಾಂಪಿಯನ್‌ ಕೂಡ ಆದೆವು. ಇದೊಂದು ಅದ್ಭುತ ಅನುಭವ. ನ್ಯೂಜಿಲೆಂಡ್‌ ತಂಡದವರು ಸಭ್ಯರು. ಆದರೆ ಹೀಗೆಲ್ಲ ಆಗಬೇಕೆಂದು ಮೊದಲೇ ನಮ್ಮ ಅದೃಷ್ಟದಲ್ಲಿ ಬರೆದಿತ್ತೇನೊ” ಎಂದು ಸ್ಟೋಕ್ಸ್ ಹೇಳಿದ್ದಾರೆ.

ಅಂದಹಾಗೆ ನ್ಯೂಜಿಲೆಂಡ್ ನೀಡಿದ 241 ರನ್​ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ 241 ರನ್​ ಗಳಿಸಿ ಆಲೌಟಾಯಿತು. ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಸೂಪರ್​ ಓವರ್​ ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ 15 ರನ್ ಪೇರಿಸಿತು. ನಂತರ ಕಿವೀಸ್ ಕೂಡ 15 ರನ್ ಬಾರಿಸಿತು. ಸೂಪರ್ ಓವರ್​ನಲ್ಲಿ ಪಂದ್ಯ ಟೈ ಆದರೂ, ಹೆಚ್ಚಿನ 8 ಬೌಂಡರಿ (24-16) ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top