fbpx
ಸಮಾಚಾರ

ವಿಶ್ವಕಪ್2019ರ ಕನಸಿನ ತಂಡ ಪ್ರಕಟ- ಟೀಂ ಇಂಡಿಯಾದ ಇಬ್ಬರಿಗೆ ಮಾತ್ರ ಸ್ಥಾನ, ವಿಶ್ವದ ನಂ.1 ಬ್ಯಾಟ್ಸ್ ಮನ್‍ಗಿಲ್ಲ ಸ್ಥಾನ

2019 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಐಸಿಸಿ ತನ್ನ ತಂಡವನ್ನು ನೆಚ್ಚಿನ 11 ಆಟಗಾರರ ತಂಡ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಐಸಿಸಿ ಅಧಿಕೃತ ವೆಬ್‍ಸೈಟ್ ತಾಣದಲ್ಲಿ 11 ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತದ ಪರವಾಗಿ ಟೂರ್ನಿಯಲ್ಲಿ 5 ಶತಕ ಗಳಿಸಿರುವ ರೋಹಿತ್ ಶರ್ಮಾ ಹಾಗೂ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ಸ್ಥಾನಗಳಿಸಿದ್ದಾರೆ.

 

 

2019 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಐಸಿಸಿ ತನ್ನ ತಂಡವನ್ನು ನೆಚ್ಚಿನ 11 ಆಟಗಾರರ ತಂಡ ಪ್ರಕಟಿಸಿದ್ದು, ಮಾಜಿ ಕ್ರಿಕೆಟಿಗರಾದ ಇಯಾನ್ ಬಿಶಪ್, ಇಯಾನ್ ಸ್ಮೀತ್, ಇಸಾ ಗುಹಾ ಹಾಗೂ ಕ್ರಿಕೆಟ್ ವಿಶ್ಲೇಷಕರಾದ ಲಾರೆನ್ಸ್ ಬೂತ್ ಮತ್ತು ಐಸಿಸಿ ಪ್ರಧಾನ ವ್ಯವಸ್ಥಾಪಕರು ತಂಡವನ್ನು ಆಯ್ಕೆ ಮಾಡಿದ್ದಾರೆ.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ತಂಡದ ನಾಯಕತ್ವ ನೀಡಲಾಗಿದ್ದು, ರೋಹಿತ್ ಶರ್ಮಾ ಹಾಗೂ ಇಂಗ್ಲೆಂಡ್ ನ ಜೇಸನ್ ರಾಯ್ ಆರಂಭಿಕರಾಗಿದ್ದರೆ, ವಿಲಯಮ್ಸನ್ ನಂ.3, ಬಳಿಕ ಜೋ ರೂಟ್, ಶಕಿಬ್ ಅಲ್ ಹಸನ್, ಬೇನ್ ಸ್ಟೋಕ್ಸ್, ಅಲೆಕ್ಸ್ ಕ್ಯಾರಿ ತಂಡದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜೋಫ್ರಾ ಅರ್ಚರ್, ಫರ್ಗೂಸನ್ ಹಾಗೂ ಬುಮ್ರಾ ಇದ್ದಾರೆ.

ಐಸಿಸಿ ವಿಶ್ವಕಪ್ ಕನಸಿನ ತಂಡ:
ರೋಹಿತ್ ಶರ್ಮ
ಜೇಸನ್ ರಾಯ್
ಕೇನ್ ವಿಲಿಯಮ್ಸನ್(ನಾಯಕ)
ಜೋ ರೂಟ್
ಶಕಿಬ್ ಅಲ್ ಹಸನ್,
ಬೇನ್ ಸ್ಟೋಕ್ಸ್,
ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್)
ಮಿಚೆಲ್ ಸ್ಟಾರ್ಕ್,
ಜೋಫ್ರಾ ಅರ್ಚರ್,
ಲೋಕಿ ಫರ್ಗೂಸನ್
ಜಸ್ಪ್ರೀತ್ ಬುಮ್ರಾ.
ಟ್ರೆಂಟ್ ಬೋಲ್ಟ್ (12ನೇ ಆಟಗಾರ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top