fbpx
ಸಮಾಚಾರ

“ನಮ್ಮ ತಂಡಕ್ಕೆ ‘ಅಲ್ಲಾ’ ಬೆಂಬಲವಿತ್ತು” – ಇಂಗ್ಲೆಂಡ್ ನಾಯಕ ಮಾರ್ಗನ್.

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕಿವೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಹೆಚ್ಚು ಬೌಂಡರಿ ಆಧಾರದ ಮೇಲೆ ಚೊಚ್ಚಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ನಾಟಕೀಯ ರೀತಿಯಲ್ಲಿ ಟ್ರೋಫಿಯನ್ನು ಎತ್ತಿಹಿಡಿದ ಇಂಗ್ಲೆಂಡ್ ತಂಡಕ್ಕೆ ‘ಅಲ್ಲಾ’ ಬೆಂಬಲವಿತ್ತು ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

 

 

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಮಾರ್ಗನ್, ತಮ್ಮ ಗೆಲುವಿಗೆ ಕಾರಣ ನೀಡಿದರು. ಮೂಲತಃ ಐರ್ಲೆಂಡ್ ದೇಶದವರಾಗಿರುವ ಮಾರ್ಗನ್‌ಗೆ, ಐರೀಶ್ ಲಕ್ ಗೆಲುವಿಗೆ ಕಾರಣವಾಗಿತ್ತಾ ಅನ್ನೋ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗನ್, ಅಲ್ಲಾ ನಮ್ಮ ಜೊತೆಗಿದ್ದ. ಹೀಗಾಗಿ ಗೆಲುವು ನಮ್ಮದಾಯಿತು ಎಂದಿದ್ದಾರೆ.

“ನಮಗೆ ಅಲ್ಲಾ ಬೆಂಬಲವಿತ್ತು. ಪಂದ್ಯದ ಕೊನೆ ಹಂತದಲ್ಲಿ ಒತ್ತಡ ಹೆಚ್ಚಾಗಿತ್ತು, ಆ ವೇಳೆ ನಾನು ಆದಿಲ್‌ ರಶೀದ್‌ ಬಳಿ ಮಾತನಾಡುವಾಗ ರಶೀದ್‌ ನಮ್ಮ ಪಾಲಿಗೆ ಅಲ್ಲಾ ಖಂಡಿತಾ ಇದ್ದಾನೆ ಎಂದು ಹೇಳಿದ್ದರು. ನಮ್ಮ ತಂಡದಲ್ಲಿ ಇತರ ದೇಶದ ಆಟಗಾರರಿದ್ದಾರೆ. ಆದರೆ ಡ್ರೆಸ್ಸಿಂಗ್‌ರೂಂನಲ್ಲಿ ನಾವೆಲ್ಲ ಒಂದೇ ಎಂದು ಮಾರ್ಗನ್ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top