fbpx
ಸಮಾಚಾರ

ವಿಭಿನ್ನ ರೀತಿಯಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ಜಗತ್ತಿಗೆ ವಿಶೇಷ ಸಂದೇಶ ನೀಡಿದ ಸಲ್ಮಾನ್ ಖಾನ್.

ಇಂಟರ್​ನೆಟ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಬಾಟಲ್ ಕ್ಯಾಪ್ ಚಾಲೆಂಜ್​ಗೆ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಫುಲ್ ಫಿದಾ ಆಗಿದ್ದು ಗೊತ್ತೆ ಇದೆ ,ಇದೀಗ ಬಾಲಿವುಡ್ ಸುಲ್ತಾನ್ ಸಲ್ಮಾನ್ ಕೂಡ ವಿಭಿನ್ನ ರೀತಿಯಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿದ್ದು ಅಷ್ಟೇ ಅಲ್ಲದೆ ಈ ಮೂಲಕವೇ ಜಗತ್ತಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

ಈಗ ಈ ಜಾಲೆಂಜ್‍ನ್ನು ತನ್ನ ಜಿಮ್‍ನಲ್ಲಿ ಮಾಡಿರುವ ಸಲ್ಲು ಬಾಟಿಲಿಯನ್ನು ಕಾಲಿನಿಂದ ಒದೆಯುವುದರ ಬದಲು ಅದನ್ನು ಉದಿ ಕ್ಯಾಪ್ ಬೀಳಿಸಿ ನಂತರ ಪಾನಿ ಬಚಾವ್ (ನೀರನ್ನು ಉಳಿಸಿ) ಎಂಬ ಸಂದೇಶವನ್ನು ಹೇಳಿ ಬಾಟಲ್‍ನಲ್ಲಿ ಇರುವ ನೀರನ್ನು ಸಂಪೂರ್ಣವಾಗಿ ಕುಡಿದು ಈ ಜಾಲೆಂಜ್‍ನ್ನು ಮಾಡಿದ್ದಾರೆ. ಈ ಮೂಲಕ ನೀರನ್ನು ಉಳಿಸಿ ಎಂಬ ಸಂದೇಶ ನೀಡಿದ್ದಾರೆ.

 

 

ಏನಿದು ಚಾಲೆಂಜ್?
ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು. ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top