fbpx
ಸಮಾಚಾರ

ಪ್ರಾದೇಶಿಕ ಭಾಷೆಗಳನ್ನು ಕೈಬಿಟ್ಟ ಅಂಚೆ ಇಲಾಖೆಯ ನೇಮಕಾತಿ ಫಲಿತಾಂಶವನ್ನೇ ತಡೆಹಿಡಿದ ಮದ್ರಾಸ್ ಹೈಕೋರ್ಟ್

ಪ್ರಾದೇಶಿಕ ಭಾಷೆಗಳನ್ನು ಹೊರಗಿಟ್ಟು ನೇಮಕಾತಿ ಪರೀಕ್ಷೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಇಟ್ಟುಕೊಳ್ಳುವ ನಿರ್ಧಾರವನ್ನು ಅಂಚೆ ಇಲಾಖೆ ಕೈಗೊಂಡಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಮದ್ಯೆ ಪ್ರವೇಶಿಸಿ ಭಾನುವಾರ (ಜುಲೈ 14) ನಿಗದಿಯಾಗಿದ್ದ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವುದನ್ನು ತಡೆದಿದೆ. ಪ್ರಕರಣದ ಹೆಚ್ಚಿನ ವಿಚಾರಣೆಯನ್ನು ಜುಲೈ 19 ಕ್ಕೆ ಮುಂದೂಡಲಾಗಿದೆ.

ಶನಿವಾರ ಸಂಜೆ ನ್ಯಾಯಮೂರ್ತಿ ಕೆ.ರವಿಚಂದ್ರಬಾಬು ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ಅವರ ವಿಶೇಷ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ಹೊರಡಿಸಿದ್ದು, ಪ್ರಾದೇಶಿಕ ಭಾಷೆಗಳನ್ನು ಏಕೆ ಹೊರಗಿಡಲಾಗಿದೆ ಎಂಬುದನ್ನು ವಿವರಿಸಲು ಕೇಂದ್ರಕ್ಕೆ ನಿರ್ದೇಶನ ನೀಡಿತು.

ಈ ತಿದ್ದುಪಡಿ ಪರೀಕ್ಷೆಯ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಬಂದಿದೆ ಮತ್ತು ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಕಳೆದ ವರ್ಷದವರೆಗೆ, ತಮಿಳು ಸೇರಿದಂತೆ ಯಾವುದೇ 15 ಅಧಿಕೃತ ಭಾಷೆಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಪರೀಕ್ಷೆಗೆ ಮೂರು ದಿನ ಬಾಕಿ ಇರುವಾಗ ಕೇವಲ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು ಎಂದು ಹೊರಡಿಸಲಾಗಿದೆ.

ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಯನ್ನು ಕರೆಯಲಾಗಿದೆ ಎಂದು ಅರ್ಜಿದಾರರು ಸೂಚಿಸಿದರು. ಈ ಹುದ್ದೆಗೆ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಯಲ್ಲಿ ಉತ್ತೀರ್ಣರಾಗುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದು ಈ ಅರ್ಹತೆಯನ್ನು ಹೊಂದಿರುವ ವ್ಯಕ್ತಿಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆಗಳನ್ನು ಬರೆಯಬೇಕು ಎಂದು ಅಧಿಸೂಚನೆ ಹೊರಡಿಸಿರುವುದು. ಏಕೆಂದರೆ ಹೆಚ್ಚಿನ ಅರ್ಜಿದಾರರು ಸ್ಥಳೀಯ ಭಾಷೆಯಾಗಿರುವ ಶಾಲೆಗಳಲ್ಲಿ ಮಾತ್ರ ಅಧ್ಯಯನ ಮಾಡಿರುತ್ತಾರೆ”ಎಂದು ಅರ್ಜಿದಾರರು ಹೇಳಿದರು.

ಕೊನೆಯ ನಿಮಿಷದ ಬದಲಾವಣೆಯು ಉದ್ಯೋಗಾವಕಾಶದಿಂದ ವಂಚಿತರಾಗಿರುವ ಸಾವಿರಾರು ಅರ್ಜಿದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಯಾವುದೇ ಸ್ಥಳೀಯ ಭಾಷೆಯ ಮೂಲ ಆಯ್ಕೆಯನ್ನು ಪುನಃಸ್ಥಾಪಿಸಬೇಕು ಮತ್ತು ಜುಲೈ 14 ರಂದು ಪ್ರಸ್ತಾವಿತ ಪರೀಕ್ಷೆಯನ್ನು ತಡೆಹಿಡಿಯಬೇಕು ಎಂದು ಅವರು ಹೇಳಿದರು.

“ಈ ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಅಥವಾ ರಾಜ್ಯದ ಸ್ಥಳೀಯ ಭಾಷೆಯಲ್ಲಿರುತ್ತವೆ” ಎಂದು ಮೇ 16 ರ ಅಧಿಕೃತ ಅಧಿಸೂಚನೆಯಲ್ಲಿ ಹೊರಡಿಸಲಾಗಿತ್ತು. ಆದಾಗ್ಯೂ, ಇಲಾಖೆ ಜುಲೈ 11 ರಂದು ಪರೀಕ್ಷಾ ಮಾದರಿಯನ್ನು ಪರಿಷ್ಕರಿಸಿತು, ಭಾಷಾ ಆಯ್ಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತಗೊಳಿಸಿ ಪ್ರಾದೇಶಿಕ ಭಾಷಿಕರ ಕೆಂಗಣ್ಣಿಗೆ ಗುರಿಯಾಗಿದೆ.

ನೇಮಕಾತಿಯಲ್ಲಿ ಹಗರಣ:
ಅರ್ಜಿದಾರರು 2016 ರಲ್ಲಿ ನಡೆದ ಇಲಾಖೆಯು ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ದುಷ್ಕೃತ್ಯಗಳು ಕಂಡುಬಂದಿವೆ ಎಂದು ಆರೋಪಿಸಿದ್ದಾರೆ. ಹರಿಯಾಣದಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ತಮಿಳು ಪತ್ರಿಕೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಇನ್ನು ಮಹಾರಾಷ್ಟ್ರ ಮತ್ತು ಪಂಜಾಬ್‌ನ ಅನೇಕ ಅಭ್ಯರ್ಥಿಗಳು ಹರಿಯಾಣದಲ್ಲಿ ನೋಂದಾಯಿಸಿಕೊಂಡಿದ್ದರು, ಮತ್ತು ಅವರೂ ತಮಿಳಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದರು. ಈ ವಿಷಯವನ್ನು ಕೇಂದ್ರ ತನಿಖಾ ದಳವು ಪರಿಶೀಲಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top