fbpx
ಸಮಾಚಾರ

“ಮಕ್ಕಳೇ ಕ್ರೀಡಾ ಕ್ಷೇತ್ರಕ್ಕೆ ಮಾತ್ರ ಬರಬೇಡಿ, ಕ್ರೀಡೆಗಿಂತ ಬೇಕರಿ ಕೆಲಸ ಉತ್ತಮ” ನ್ಯೂಜಿಲೆಂಡ್‌ ಆಟಗಾರನ ಹತಾಶೆಯ ನುಡಿ.

ವಿಶ್ವಕಪ್ ಇತಿಹಾಸದಲ್ಲೇ ಅತ್ಯದ್ಭುತ ಫೈನಲ್ ಮೂಲಕ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ವಿಶ್ವಕಪ್ ಫೈನಲ್ ಪಂದ್ಯವು ರೋಚಕ ಟೈ ಫಲಿತಾಂಶದಲ್ಲಿ ಅಂತ್ಯಕಂಡಿದೆ. ಇದರಂತೆ ಅತಿ ಹೆಚ್ಚು ಬೌಂಡರಿ (ಬೌಂಡರಿ ಹಾಗೂ ಸಿಕ್ಸರ್) ಗಳಿಸಿದ ತಂಡವೆಂಬ ಕಾರಣಕ್ಕಾಗಿ ಚೊಚ್ಚಲ ವಿಶ್ವಕಪ್‌ ಕಿರೀಟಕ್ಕೆ ಮುತ್ತಿಕ್ಕಿದೆ.

 

 

 

 

ಫೈನಲ್ ವಿರೋಚಿತ ಸೋಲಿನ ಬಳಿಕ ನ್ಯೂಜಿಲೆಂಡ್ ಆಲ್​ರೌಂಡರ್ ಜಿಮ್ಮಿ ನೀಶಮ್ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಮಕ್ಕಳೇ ಯಾರು ಕೂಡ ಕ್ರೀಡೆಯನ್ನು ಆಯ್ದುಕೊಳ್ಳಬೇಡಿ. ಅದಕ್ಕಿಂತ ಬೇಕರಿ ಕೆಲಸ ಅಥವಾ ಇನ್ಯಾವುದಾದರೂ ಉತ್ತಮ ಎಂದು ಟ್ವೀಟ್ ಮಾಡಿ ನೋವು ತೋಡಿಕೊಂಡಿದ್ದಾರೆ.

“ನಮ್ಮ ತಂಡಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ದನಿ ದಿನಪೂರ್ತಿ ನಮ್ಮ ಕಿವಿಗೆ ಮುಟ್ಟುತ್ತಿತ್ತು. ಗೆದ್ದೇ ತೀರುವ ಹಂಬಲ ನಮ್ಮದಾಗಿತ್ತು. ಆದರೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳೇ, ಕ್ರೀಡೆಯನ್ನು ನಿಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳದಿರಿ. ಬದಲಿಗೆ ಬೇಕರಿ ಕೆಲಸ ಬೇರೇನಾದರೂ ತೆಗೆದುಕೊಳ್ಳಿ. ಬೊಜ್ಜು ತುಂಬಿಸಿಕೊಂಡು 60 ವರ್ಷಕ್ಕೆ ಕೊನೆಯುಸಿರೆಳೆದರಷ್ಟೇ ಸಾಕು,” ಎಂದು ತಮ್ಮೊಳಗಿನ ನೋವು ಹಾಗೂ ಹತಾಶೆಯನ್ನು ಬಿಚ್ಚಿಟ್ಟಿದ್ದಾರೆ.

ಅಂದಹಾಗೆ ನ್ಯೂಜಿಲೆಂಡ್ ನೀಡಿದ 241 ರನ್​ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ 241 ರನ್​ ಗಳಿಸಿ ಆಲೌಟಾಯಿತು. ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಸೂಪರ್​ ಓವರ್​ ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ 15 ರನ್ ಪೇರಿಸಿತು. ನಂತರ ಕಿವೀಸ್ ಕೂಡ 15 ರನ್ ಬಾರಿಸಿತು. ಸೂಪರ್ ಓವರ್​ನಲ್ಲಿ ಪಂದ್ಯ ಟೈ ಆದರೂ, ಹೆಚ್ಚಿನ 8 ಬೌಂಡರಿ (24-16) ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top