fbpx
ಸಮಾಚಾರ

“ಜಡೇಜಾಗೆ ಸಾಂತ್ವನ ಹೇಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ” ಪತ್ನಿ ರಿವಾಬಾ ಜಡೇಜಾ

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲಿ ರವೀಂದ್ರ ಜಡೇಜಾ ಅವರ ವಿರೋಚಿತ ಹೋರಾಟದ ಹೊರತಾಗಿಯೂ ಟೀಂ ಇಂಡಿಯಾ ಸೋಲನುಭವಿಸಿತು. ಈ ಸೋಲಿನ ಆಘಾತದಿಂದ ಪತಿ ಹೊರ ಬಂದಿಲ್ಲ ಎಂದು ಜಡೇಜಾ ಪತ್ನಿ ರಿವಾಬಾ ಹೇಳಿದ್ದಾರೆ.

ಸೋಲಿನ ವಿಚಾರವಾಗಿ ಮಾತನಾಡಿದ ರವೀಂದ್ರ ಜಡೇಜಾ, ನಾನು ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರಬರದಿದ್ದರೆ ಗೆಲುವು ಸಾಧಿಸುತ್ತಿದ್ದೇವು. ಇನ್ನೇನು ಗೆಲುವು ಸಾಧಿಸುತ್ತೇವೆ ಎನ್ನುವ ಹಂತದಲ್ಲಿಯೇ ಸೋಲನುಭವಿಸಿದೇವು ಎಂದು ಹೇಳುತ್ತಲೇ ಇದ್ದರು. ಈ ಆಘಾತದಿಂದ ಅವರು ಇನ್ನೂ ಹೊರ ಬಂದಿಲ್ಲ. ಹೀಗಾಗಿ ಅವರಿಗೆ ಸಾಂತ್ವನ ಹೇಳಲು ನಮ್ಮಿಂದಾಗುತ್ತಿಲ್ಲ ಎಂದು ರಿವಾಬಾ ಜಡೇಜಾ ತಿಳಿಸಿದ್ದಾರೆ.

ಪತಿ ಯಾವಾಗಲೂ ಸ್ಫೂರ್ತಿಯಿಂದ ಆಟವಾಗುತ್ತಾರೆ. ನೀವು ಅದನ್ನು ನೋಡಿರಬಹುದು. ಪಂದ್ಯಗಳಲ್ಲಿ ಆಲ್ ರೌಂಡರ್ ಆಗಿ ಮಿಂಚುತ್ತಾರೆ. 2013ರಲ್ಲಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲುವು ಸಾಧಿಸಿದಾಗ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು ಎಂದು ರಿಬಾವಾ ಜಡೇಜಾ ನೆನೆದರು.

ಸೆಮಿಫೈನಲ್ ಸೋಲಿನ ಬಳಿಕ ಟ್ವೀಟ್ ಮಾಡಿದ್ದ ಜಡೇಜಾ, ‘ಕೆಳಗೆ ಬಿದ್ದಾಗೆಲ್ಲ ಎದ್ದು ನಿಲ್ಲೋದನ್ನು, ಯಾವತ್ತಿಗೂ ಹೋರಾಟ ನಿಲ್ಲಿಸದಿರೋದನ್ನು ಕ್ರೀಡೆ ನನಗೆ ಕಲಿಸಿಕೊಟ್ಟಿದೆ. ನನ್ನ ಸ್ಫೂರ್ತಿಯ ಮೂಲವಾಗಿರುವ ಪ್ರತೀ ಅಭಿಮಾನಿಗಳಿಗೂ ಅವರ ಬೆಂಬಲಕ್ಕೆ ತಕ್ಕ ಧನ್ಯವಾದ ಸಲ್ಲಿಸುತ್ತೇನೆ ಎಂದು ಭಾವಿಸಲಾರೆ. ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಹೀಗೆ ಸ್ಫೂರ್ತಿ ತುಂಬುತ್ತಲೇ ಇರಿ; ನನ್ನ ಕೊನೇ ಉಸಿರು ಇರೋವರೆಗೂ ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಲವ್ ಯೂ ಆಲ್’ ಎಂದು ಬರೆದುಕೊಂಡಿದ್ದರು.

ಅಂದಹಾಗೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 240 ರನ್ ಟಾರ್ಗೆಟ್ ನೀಡಿತ್ತು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೇವಲ 1 ರನ್ ಸಿಡಿಸಿ ಔಟಾದರು. ಇನ್ನು ರಿಷಬ್ ಪಂತ್ ಅಲ್ಪ ಹೋರಾಟ ನೀಡಿದರೆ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಅಬ್ಬರಿಸಿಲ್ಲ. ರವೀಂದ್ರ ಜಡೇಜಾ ಹಾಗೂ ಎಂ.ಎಸ್.ಧೋನಿ ಹೋರಾಟದಿಂದ ಭಾರತ ಭರ್ಜರಿ ಕಮ್‌ಬ್ಯಾಕ್ ಮಾಡಿತು. ಜಡೇಜಾ 77 ರನ್ ಸಿಡಿಸಿದರೆ, ಧೋನಿ 50 ರನ್ ಸಿಡಿಸಿದರು. ಭಾರತ 18 ರನ್ ವಿರೋಚಿತ ಸೋಲು ಕಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top