fbpx
ಸಮಾಚಾರ

“ಮಾನ ಮರ್ಯಾದೆ ಇದ್ದರೇ ಬಿಜೆಪಿಯವರು ಎಲ್ಲವನ್ನೂ ಒಪ್ಪಿಕೊಳ್ಳಬೇಕು” ಡಿಕೆಶಿ ವಾಗ್ದಾಳಿ

ಅತೃಪ್ತ ಶಾಸಕರು ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರದ ಪತನಕ್ಕೆ ಕ್ಷಣಗಣನೆ ಆರಂಭಿಸಿರುವಂತೆಯೇ ಟ್ರಬಲ್ ಶೂಟರ್ ಎಂದೇ ಖ್ಯಾತರಾದ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಏರುವಾಗ ಬಿಜೆಪಿ ನಾಯಕ ಆರ್. ಅಶೋಕ್ ಕಾಣಿಸಿಕೊಂಡಿದ್ದು ದೋಸ್ತಿ ಸರ್ಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಕೆರಳಿಸಿದೆ. ಆರ್.ಅಶೋಕ್ ಮತ್ತು ಬಿಜೆಪಿ ಮೇಲೆ ಎಂಟಿಬಿ ವಾಗ್ದಾಳಿ ಮಾಡಿದ್ದಾರೆ.

‘ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ. ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಆದರೆ ಹೋಟೆಲ್, ಬಾಂಬೆ, ದೆಹಲಿ, ಏರ್ ಪೋರ್ಟ್, ಫ್ಲೈಟ್​ ವ್ಯವಸ್ಥೆ ಸೇರಿದಂತೆ ಎಲ್ಲಾ ಆಪರೇಷನ್ ಬಿಜೆಪಿಯವರದ್ದೇ’, ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನ ಒಪ್ಪಿಕೊಳ್ಳಬೇಕು. ನಾವು ಮಾಡ್ತಿದ್ದೇವೆ, ಈ ಆಪರೇಷನ್ ನಮ್ಮದೆ, ನಮಗೆ ಚೇರ್ ಬೇಕು ಅಂತ ಬಿಜೆಪಿ ನಾಯಕರು ‌ಒಪ್ಪಿಕೊಳ್ಳಬೇಕು. ಪಂಚಾಯ್ತಿಗಳಲ್ಲಿ ನಡೆದಹಾಗೆ ನಾವು ಮಾಡ್ತಿದ್ದೇವೆ ಅಂತ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top