fbpx
ಸಮಾಚಾರ

ಇನ್ಮುಂದೆ ಕನ್ನಡದಲ್ಲಿಯೇ ಜಗತ್ತಿನ ಸಕಲ ಜ್ಞಾನ ಮತ್ತು ಮನರಂಜನೆಗಳು.

ಕಳೆದ ಕೆಲ ವರ್ಷಗಳಿಂದ ಸದಾ ಸುದ್ದಿಗೆ ಗುರಿಯಾಗುತ್ತಿದ್ದ ಡಬ್ಬಿಂಗ್ ವಿವಾದವು ಈಗ ನಿಧಾನವಾಗಿ ತಣ್ಣಗಾಗಿರುವುದನ್ನು ನಾವೆಲ್ಲಾ ಗಮನಿಸಬಹುದು. ಅಘೋಷಿತ ಡಬ್ಬಿಂಗ್ ನಿಷೇಧದ ಕಾಲದಿಂದ ಮುಂದೆ ಬಂದು ಕಳೆದ ಮೂರು ವರ್ಷಗಳಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆ, ಮೂಲ ಚಿತ್ರಗಳ ಜೊತೆ ಏಕಕಾಲಕ್ಕೆ ಡಬ್ಬಿಂಗ್ ಆದ ಚಿತ್ರಗಳ ಬಿಡುಗಡೆ, ಕನ್ನಡದಲ್ಲಿ ತನ್ನದೇ ಆದ ಕ್ರೀಡೆಯ ಚಾನೆಲ್, ಕನ್ನಡೀಕರಣಗೊಂಡ ಕಾರ್ಟೂನುಗಳು ಕೂಡ ಪ್ರಸಾರವಾಗುತ್ತಿವೆ. ಇದೀಗ ದೇಶ- ವಿದೇಶಗಳ ವೈಜ್ಞಾನಿಕ, ಬಾಹ್ಯಾಕಾಶ, ಜೀವಶಾಸ್ತ್ರಗಳ ಸಂಶೋಧನೆಯನ್ನು ಇನ್ನು ಮುಂದೆ ಟಿವಿ ಚಾನೆಲ್​ಗಳಲ್ಲಿ ಕನ್ನಡದಲ್ಲೇ ಆಸ್ವಾದಿಸಬಹುದು.

ಇಂಗ್ಲಿಷ್, ಹಿಂದಿ ಸೇರಿದಂತೆ ಕೆಲವು ಭಾಷೆಗಳಿಗೆ ಮಾತ್ರ ಸೀಮಿತವಾಗಿದ್ದ ‘ಡಿಸ್ಕವರಿ’, ‘ಅನಿಮಲ್ ಪ್ಲಾನೆಟ್’, ‘ಡಿಸ್ಕವರಿ ಕಿಡ್ಸ್’ ನಂತಹ ಚಾನೆಲ್ಲುಗಳನ್ನು ಮುಂದಿನ ತಿಂಗಳಿನಿಂದ ಪ್ರಸಾರ ಮಾಡಲಾಗುತ್ತದೆ ಎಂದು ಡಿಸ್ಕವರಿ ನೆಟ್​ವಕ್ಸ್​ನ ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕಿ ಮೇಘಾ ಟಾಟಾ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಆಗಸ್ಟ್ 15ರ ವೇಳೆಗೆ ಈ ಚಾನೆಲ್​ಗಳು ಕನ್ನಡದಲ್ಲಿ ಪ್ರಸಾರವಾಗಲಿವೆ ಎಂದಿದ್ದಾರೆ.

ಮೊದಲಿನಿಂದಲೂ ಕೇವಲ ಇಂಗ್ಲಿಷ್​ನಲ್ಲಿ ಮಾತ್ರ ಇದ್ದ ಈ ಚಾನೆಲ್ ಗಳು 2012ರಿಂದ ತಮಿಳಿಗೆ ಪ್ರತ್ಯೇಕ ಚಾನೆಲ್ ಅನ್ನು ಹೊಂದಿದೆ. ಆದರೆ, ಹಿಂದಿ, ತೆಲುಗು, ಮತ್ತು ಬಂಗಾಳಿ ಭಾಷೆಗಳಿಗೆ ಇಂಗ್ಲಿಷ್ ಚಾನೆಲ್​ನಲ್ಲೇ ಆಯಾ ಭಾಷಾ ಧ್ವನಿ ಬದಲಾವಣೆ ಆಯ್ಕೆ ನೀಡಲಾಗಿದೆ. ಇದೀಗ ಕನ್ನಡದಲ್ಲಿ ಪ್ರತ್ಯೇಕ ವಾಹಿನಿ ಪ್ರಾರಂಭವಾಗಲಿದೆಯೇ ಅಥವಾ ಭಾಷೆ ಆಯ್ಕೆ ನೀಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇಷ್ಟು ದಿನ ಅಘೋಷಿತ ಡಬ್ಬಿಂಗ್ ನಿಷೇಧದಿಂದ ಕನ್ನಡದ ಮಕ್ಕಳು ಇಂತಹ ಎಷ್ಟೋ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳಿಂದ ವಂಚಿತರಾಗುತ್ತಿದ್ದರು.. ಇದೀಗ ಇದಕ್ಕೆಲ್ಲಾ ಪ್ರಹಾರ ಸಿಕ್ಕಿದ್ದು ಮಕ್ಕಳ ವ್ಯಕ್ತಿವಿಕಾಸಕ್ಕೆ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್, ಪೋಗೋ, ಕಾರ್ಟೂನ್ ನೆಟ್‌ವರ್ಕ್, ಹಿಸ್ಟರಿ ಚಾನೆಲ್ ಮುಂತಾದ ವಾಹಿನಿಗಳ ಅಗತ್ಯ ತುಂಬಾ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top