fbpx
ಸಮಾಚಾರ

ಅತೀವ ಬೇಸರದಿಂದ ಕಣ್ಣೀರಿಟ್ಟ ವಿಡಿಯೋ ಹಂಚಿಕೊಂಡ ನಟಿ ಪಾರುಲ್ ಯಾದವ್.

ನಟಿ ಪಾರುಲ್ ಯಾದರ್ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಕಾರಣವೇನೆಂದರೆ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಸೋಲುಕಂಡಿದ್ದು. ಹೌದು ಪಾರುಲ್ ಯಾದವ್‌ಗೆ ಕ್ರಿಕೆಟ್ ಎಂದರೆ ಸಿಕ್ಕಾಪಟ್ಟೆ ಕ್ರೇಜ್. ಅದರಲ್ಲೂ ಭಾರತ ಈ ಸಲ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂದೇ ಅವರು ನಿರೀಕ್ಷಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಭಾರತದ ಪ್ರಯತ್ನ ಫಲಿಸಲಿಲ್ಲ.

 

 

 

ಈ ಹಿನ್ನೆಲೆಯಲ್ಲಿ ಅತೀವ ಬೇಸರಗೊಂಡ ಪಾರುಲ್ ಯಾದವ್ ಮನನೊಂದು ಕಣ್ಣೀರಿಟ್ಟಿದ್ದಾರೆ. ಇನ್ನು ಜೀವನದಲ್ಲಿ ಮತ್ತೆಂದೂ ನಾನು ಕ್ರಿಕೆಟ್ ನೋಡಲ್ಲ. ನನಗೆ ತುಂಬಾ ನಿರಾಸೆಯಾಗಿದೆ, ಬೇಸರವಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ. ವೀಡಿಯೊ ಜತೆಗೆ ಕಣ್ಣೀರಿನ ಇಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಪಾರುಲ್ ಯಾದವ್ ಕಣ್ಣೀರಿನ ವೀಡಿಯೊಗೆ ಸಾಕಷ್ಟು ಕಾಮೆಂಟ್‌ಗಳು ಹರಿದುಬಂದಿವೆ.

ಅಂದಹಾಗೆ ನೆನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ 18 ರನ್ ಗಳ ಸೋಲು ಕಂಡು ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಕೊನೆಯತಕ ರೋಚಕವಾಗಿ ಸಾಗಿದ ಪಂದ್ಯ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರೆರಚಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top