fbpx
ಸಮಾಚಾರ

“ನೋ ಬಾಲ್ ಹಾಕಿದರೂ ಅಂಪೈರ್‌ಗೆ ಗೊತ್ತಾಗಲೇ ಇಲ್ಲವೇ- ಕೆಟ್ಟ ತೀರ್ಪಿನಿಂದ ಭಾರತಕ್ಕೆ ವಿಶ್ವಕಪ್ ನಷ್ಟ, ಅಭಿಮಾನಿಗಳ ಆಕ್ರೋಶ,”

ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ 18 ರನ್ ಗಳ ಸೋಲು ಕಂಡು ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. . ಭಾರತದ ಪರ ಅರ್ಧಶತಕ ಸಿಡಿಸಿ ನಿರ್ಣಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ರನೌಟ್ ಇಡೀ ಪಂದ್ಯದ ಗತಿಯನ್ನು ಬದಲಿಸಿತ್ತು. ಆದರೆ ಇದೇ ರನೌಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.

 

 

 

 

 

ಪಂದ್ಯದ ನಿರ್ಣಾಯಕ ಹಂತದಲ್ಲಿ 48.3ನೇ ಓವರ್ ಎಸೆದ ಲೂಕಿ ಫೆರ್ಗ್ಯೂಸನ್ ದಾಳಿಯಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್‌ಗೆ ಬಲಿಯಾಗಿದ್ದರು. ಆದರೆ ಟ್ವಿಟರ್‌ನಲ್ಲಿ ಅಭಿಮಾನಿಗಳು ಮಾಡುತ್ತಿರುವ ವಾದಗಳ ಪ್ರಕಾರ ಧೋನಿ ರನೌಟ್‌ಗಿಂತಲೂ ಹಿಂದಿನ ಎಸೆತವು ನೋಬಾಲ್ ಆಗಿತ್ತು. ಇದಕ್ಕೆ ಸ್ಪಷ್ಟ ಪುರಾವೆಯನ್ನು ನೀಡಿದ್ದಾರೆ. ಐಸಿಸಿ ನಿಮಯಗಳ ಪ್ರಕಾರ ಮೂರನೇ ಪವರ್‌ಪ್ಲೇನಲ್ಲಿ ಅಂದರೆ 40ರಿಂದ 50 ಓವರ್‌ಗಳ ಮಧ್ಯೆ ಗರಿಷ್ಠ ಐವರು ಫೀಲ್ಡರ್‌ಗಳಿಗೆ ಮಾತ್ರ 30 ಯಾರ್ಡ್ ಸರ್ಕಲ್‌ನಿಂದ ಹೊರಗಡೆ ಕ್ಷೇತ್ರರಕ್ಷಣೆ ಮಾಡುವ ಅವಕಾಶವಿರುತ್ತದೆ.

ಆದರೆ ಧೋನಿ ರನ್​ಔಟ್​ ಆಗುವ ಎಸೆತಕ್ಕೂ ಮೊದಲು ಗ್ರಾಫಿಕ್ಸ್​ ನಲ್ಲಿ ತೋರಿಸುವಂತೆ 6 ಜನ ಕ್ಷೇತ್ರ ರಕ್ಷಕರು 30 ಯಾರ್ಡ್​ನಿಂದ ಹೊರಗೆ ಫೀಲ್ಡಿಂಗ್​ ಮಾಡುತ್ತಿದ್ದರು. ಹೀಗಾಗಿ ಆ ಚೆಂಡನ್ನು ನೋಬಾಲ್ ಎಂದು ಘೋಷಣೆ ಮಾಡಬೇಕಿತ್ತು. ಒಂದು ವೇಳೆ ಅಂಪೈರ್ ನೋ ಬಾಲ್ ನೀಡಿದ್ದರೆ ಅಂಪೈರ್‌ಗಳು ನೋ ಬಾಲ್ ನೀಡಿದ್ದಲ್ಲಿ ಧೋನಿ ಗೇಮ್ ಪ್ಲ್ಯಾನ್ ಬೇರೆಯೇ ಆಗಿರುತ್ತಿತ್ತು. ಅಲ್ಲದೆ ರನೌಟ್ ಆದ ಎಸೆತವನ್ನು ಸಿಕ್ಸರ್‌ಗಟ್ಟಲು ಪ್ರಯತ್ನಿಸುತ್ತಿದ್ದರು. ಇದರಿಂದಾಗಿ ಭಾರತಕ್ಕೆ ಗೆಲುವು ದಾಖಲಾಗಬಹುದಿತ್ತು ಎಂಬ ವಾದಗಳು ಕೇಳಿಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top