fbpx
ಸಮಾಚಾರ

ಸಿದ್ದರಾಮಯ್ಯಗೆ ಮತ್ತೆ ಎದುರಾಯಿತು ಭೂ ಸಂಕಷ್ಟ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಡಿನೋಟಿಫಿಕೇಶನ್ ಮತ್ತು ಭೂ ಕಬಳಿಕೆ ಪ್ರಕರಣಕ್ಕೆ ಮರು ಜೀವ ಸಿಕ್ಕಿದೆ. ದೂರುದಾರ ಗಂಗರಾಜು ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಮೂಲಕ ಮೈಸೂರು ಪೊಲೀಸರು ಬಿ ರಿಪೋರ್ಟ್ ಸಲ್ಲಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 14 ಮಂದಿ ಹೆಸರುಗಳ ಸೇರ್ಪಡೆಗೆ ದೂರುದಾರ ಮನವಿ ಮಾಡಿದ್ದಾರೆ. 1996 ರಿಂದ 1998 ಸಮಯದಲ್ಲಿ ಮೈಸೂರಿನಲ್ಲಿ ಕೆಲಸ ನಿರ್ವಹಿಸಿದ್ದ ಅಧಿಕಾರಿಗಳ ಹೆಸರು ಸೇರ್ಪಡೆಗೆ ಮನವಿ ಮಾಡಲಾಗಿದೆ. ಮಾಜಿ ಎಂಎಲ್ ಸಿ ಶಾಸಕ ಎಸ್.ಎ. ರಾಮದಾಸ್ ಹಾಗೂ ಗೊ.ಮಧುಸೂದನ್ ಹೆಸರು ಸೇರ್ಪಡೆಗೂ ವಿನಂತಿ ಮಾಡಲಾಗಿದೆ.

ಕೇಸ್ ವಿವರ: ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 535 ಎಕರೆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. 10 ವರ್ಷಗಳ ಬಳಿಕ ಬಡಾವಣೆ ರಚಿಸಿ ನಿವೇಶನ ಹಂಚಿಕೆಯಾದ ನಂತರ ಸಿದ್ದರಾಮಯ್ಯ ಅವರ ಆಪ್ತ ಪಾಪಣ್ಣ (ಆಗಿನ ಹಿನಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ) ಅವರು ತಮ್ಮ ಸಂಬಂಧಿಕರಿಗೆ ಸೇರಿದ 30 ಗುಂಟೆ ಜಮೀನಿನನ್ನು ಕೈ ಬಿಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿ ಮುಡಾ ಈ ಜಾಗವನ್ನು ಡಿನೋಟಿಫೈ ಮಾಡಿತ್ತು. ಸರ್ವೇ ನಂಬರ್ 70/4 ರಲ್ಲಿನ ಮೂವತ್ತು ಗುಂಟೆ ಭೂಮಿ ಪಡೆದು ಕಾನೂನು ಬಾಹಿರವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top