fbpx
ಸಮಾಚಾರ

ಬಾಳೆ ದಿಂಡನ್ನ ಅಡುಗೆಲಿ ಬಳ್ಸ್ಕೊಂಡ್ರೆ 10 ಕಿಂತ ಹೆಚ್ಚು ಲಾಭ ಪಡ್ಕೊಬಹುದು ಹೇಗೆ ಅಂತೀರಾ ಮುಂದೆ ಓದಿ

ಬಾಳೆಹಣ್ಣಿನ ಒಂದು ಸಣ್ಣ ತುಂಡು ಎಷ್ಟೆಲ್ಲ ಆರೋಗ್ಯಕಾರಿ ಪ್ರಯೋಜನಗಳನ್ನು ಮಾಡುತ್ತದೆ ಬನ್ನಿ ತಿಳಿದುಕೊಳ್ಳೋಣ 

 

 

 

ಬೊಜ್ಜಿನ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಬಾಳೆ ದಿಂಡನ್ನು ಬಳಸಿ ಮಾಡಿದ ಅಡುಗೆಗಳನ್ನು ತಿಂದರೆ ದೇಹಕ್ಕೆ ಪೌಷ್ಟಿಕಾಂಶಗಳ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಬಾಳೆದಿಂಡಿನ ಇರುವ ಅಧಿಕ ಫೈಬರ್ ಅಂಶವೂ ಅನಗತ್ಯ ಕೊಬ್ಬನ್ನು ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ .

 ಅಸಿಡಿಟಿ ಸಮಸ್ಯೆ

ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ ಅರ್ಧ ಲೋಟ ಬಾಳೆ ದಿಂಡಿನ ರಸವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಸಿಡಿಟಿ   ಮತ್ತೆ ಬರುವುದಿಲ್ಲ

 ಮೂತ್ರಪಿಂಡದ ಕಲ್ಲು

ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಮೂತ್ರ ಕಟ್ಟಿದ ಸಮಸ್ಯೆ ಮೂತ್ರಪಿಂಡದ ಕಲ್ಲುಗಳು ಇವುಗಳಿಂದ ಮುಕ್ತಿ ಹೊಂದಬಹುದು .
ಹೊಟ್ಟೆಯಲ್ಲಿನ  ಕಲ್ಮಶಗಳನ್ನು ದೂರ ಮಾಡಲು ಬಾಳೆದಿಂಡಿನ ಪಲ್ಯ ಅಥವಾ ಸಾರನ್ನು ಸೇವಿಸುತ್ತಾ ಬರಬೇಕು .

 ರೋಗ ನಿರೋಧಕ ಶಕ್ತಿ

ಬ್ಯಾಕ್ಟೀರಿಯಾ ಹಾಗೂ ವೈರಸ್ ಇಂತಹ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು .

 ಸಕ್ಕರೆ ಕಾಯಿಲೆ

ಸಕ್ಕರೆ ಕಾಯಿಲೆ ವಿರುದ್ಧ ಹೋರಾಡುವ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿ ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತದೆ .

ಅತಿಯಾದ ರಕ್ತದೊತ್ತಡ

ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಬಾಳೆದಿಂಡಿನ ರಸ ರಾಮಬಾಣ ಬಾಳೆದಿಂಡಿನಲ್ಲಿರುವ ವಿಟಮಿನ್ ಬಿ ೬ ಹಾಗೂ ಪೊಟಾಶಿಯಂ ಅಂಶ ರಕ್ತದಲ್ಲಿನ ಹಿಮೋಗ್ಲೋಬಿನ್ ಉತ್ಪಾದನೆ ಹಾಗೂ ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಾಯಕಾರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top