fbpx
ಸಮಾಚಾರ

‘ಪೈಲ್ವಾನ್’ ಚಿತ್ರಕ್ಕಾಗಿ ಅರ್ಜುನ್ ಜನ್ಯ ಹೊಸ ಪ್ರಯೋಗ!

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವ ಚಿತ್ರದ ಮೇಕಿಂಗ್ ಸ್ಟಿಲ್ಲುಗಳೇ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

ಈ ನಡುವೆ ಇಂದಿನಿಂದ ಚಿತ್ರದ ಹಾಡುಗಳು ಬಿಡುಗಡೆಗೊಳ್ಳುತ್ತಿದ್ದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂತಸಗೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಹೆಚ್ಚು ಶ್ರಮ ವಹಿಸಿ ಸಂಗೀತ ಸಂಯೋಜಿಸಿದ್ದಾರಂತೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಮತ್ತು ಎರಡು ಥೀಮ್ ಮ್ಯೂಸಿಕ್ ಗಳು ಇದ್ದು ಹಾಡುಗಳಿಗಾಗಿ ಅರ್ಜುನ್ ಜನ್ಯ ಹೊಸ ಪ್ರಯೋಗ ಮಾಡಿದ್ದಾರಂತೆ..

ಪಂಜಾಬಿ ಸಂಗೀತ ಸಲಕರಣೆಗಳನ್ನು ಮಾತ್ರವೇ ಬಳಸಿಕೊಂಡು ಚಿತ್ರದಲ್ಲಿರುವ ಥೀಮ್ ಮ್ಯೂಸಿಕ್ ಅನ್ನು ಸಂಯೋಜನೆ ಮಾಡಿದ್ದಾರಂತೆ. ಇದೆ ರೀತಿ ಚಿತ್ರದ ಎಲ್ಲಾ ಹಾಡುಗಳಿಗೂ ಹೊಸ ಹೊಸ ಪ್ರಯೋಗ ಮಾಡಿರುವುದಾಗಿ ಅರ್ಜುನ್ ಜನ್ಯ ಹೇಳಿದ್ದಾರೆ.

ಕೆಲದಿನಗಳ ಹಿಂದೆ ಲಹರಿ ಸಂಸ್ಥೆಯು ಅಭಿನಯ ಚಕ್ರವರ್ತಿ ಅಭಿನಯದ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿ ಸದ್ದು ಮಾಡಿತ್ತು. ಇದೀಗ ‘ಪೈಲ್ವಾನ್’​ನ ಗಾನ ಬಜಾನಗೆ ವೇದಿಕೆ ಸಿದ್ದಪಡಿಸಲು ಚಿತ್ರತಂಡ ಮುಂದಾಗಿದೆ. ಚಿತ್ರದ ಹಾಡುಗಳನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಕೃಷ್ಣ ಅ್ಯಂಡ್ ಟೀಂ ಪ್ಲ್ಯಾನ್​ ಮಾಡಿಕೊಂಡಿದೆಯಂತೆ. ಅಂದರೆ ಜುಲೈ 27 ರಂದು ‘ಪೈಲ್ವಾನ್’​ನ ಹಾಡುಗಳು ಲೋಕಾಪರ್ಣೆ ಆಗಲಿದೆ.

ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಇಷ್ಟು ದಿನ “ಪೈಲ್ವಾನ್‌’ ಚಿತ್ರದ ಹಾಡುಗಳು ಹೇಗಿರಲಿವೆ ಎಂಬ ಪ್ರಶ್ನೆಗೆ ಜುಲೈ 27 ರಂದು ಉತ್ತರ ಸಿಗಲಿದೆ. ಆಡಿಯೋ ಸಮಾರಂಭಕ್ಕೂ ಮುನ್ನವೇ ಒಂದೊಂದರಂತೆ ವಾರಕ್ಕೊಂದು ಹಾಡನ್ನು ಚಿತ್ರತಂಡ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top