fbpx
ಸಮಾಚಾರ

“ರಾಯುಡು ನಿವೃತ್ತಿಗೆ ಟೀಂ ಇಂಡಿಯಾದ ಈ ಆಟಗಾರ ಕಾರಣ” ಯೋಗರಾಜ್ ಸಿಂಗ್

ಭಾರತ ತಂಡದ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಕಳೆದ ವಾರವಷ್ಟೇ ತಮ್ಮ ಅಂತಾರಾಷ್ಟ್ರೀಯ ಎಲ್ಲ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದರು. ಆದರೆ, ರಾಯುಡು ಅವರ ವಿದಾಯಕ್ಕೆ ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಕಾರಣ ಎಂದು ಯುವರಾಜ್​ ಸಿಂಗ್​ ತಂದೆ ಯೋಗ್ರಾಜ್ ಸಿಂಗ್ ​ ಅವರು ಕ್ರೀಡಾ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ರಾಯುಡು ದಿಢೀರ್ ನಿವೃತ್ತಿಗೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾರಣ ಎಂದಿದ್ದಾರೆ. ಅಷ್ಟೇ ಅಲ್ಲದೆ ನೀನು ಕೂಡ ನನ್ನ ಮಗನ ಸ್ಥಾನದಲ್ಲಿದ್ದೀಯಾ. ತರಾತುರಿಯ ನಿರ್ಧಾರ ತೆಗೆದುಕೊಂಡಿರುವೆ. ಈಗಲೂ ಸಮಯವಕಾಶವಿದೆ. ನಿವೃತ್ತಿಯಿಂದ ಹೊರಬಂದು ಮತ್ತೊಮ್ಮ ಸಾಮರ್ಥ್ಯವನ್ನು ತೋರಿಸು. ಧೋನಿಯಂತಹ ಕೊಳಕು ಜನರು ಶಾಶ್ವತವಾಗಿ ಉಳಿಯುವುದಿಲ್ಲ” ಎಂದು ಯುವರಾಜ್​ ಸಿಂಗ್ ಹೇಳಿದ್ದಾರೆ.

ಧೋನಿ ವಿರುದ್ಧ ಯೋಗರಾಜ್ ಸಿಂಗ್ ಮಾಡಿರುವ ಆರೋಪವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಯುವರಾಜ್ ಅವರ ತಂದೆ ತಮ್ಮ ವಿನಾಕಾರಣ ಎಂಎಸ್​ಡಿಯನ್ನು ಗುರಿಯಾಗಿಸುತ್ತಿದ್ದಾರೆ ಎಂದು ಮಹೀ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಈ ಹಿಂದೆ ಕೂಡ ಮಹೇಂದ್ರ ಸಿಂಗ್ ಧೋನಿಯಿಂದಾಗಿ ಟೀಂ ಇಂಡಿಯಾ ನಾಯಕತ್ವವು ಯುವರಾಜ್ ಸಿಂಗ್​ಗೆ ಕೈ ತಪ್ಪಿದೆ ಎಂದು ಯೋಗರಾಜ್​ ಸಿಂಗ್ ಆರೋಪಿಸಿದ್ದರು.

ಆಲ್‌ರೌಂಡರ್‌ ವಿಜಯ್‌ ಶಂಕರ್‌ ಗಾಯಗೊಂಡು ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ರಾಯುಡು ಬದಲಾಗಿ ಮಯಾಂಕ್‌ ಅಗರ್ವಾಲ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು. ಇದಕ್ಕೂ ಮುನ್ನ ವಿಶ್ವಕಪ್‌ಗೆ ಪ್ರಕಟಿಸಲಾದ ಪ್ರಾಥಮಿಕ 15 ಆಟಗಾರರ ತಂಡದಿಂದಲೂ ರಾಯುಡು ಅವರನ್ನು ಕೈ ಬಿಡಲಾಗಿತ್ತು. ಆದರೆ, ವಿಶ್ವಕಪ್‌ಗೆ ಪ್ರಕಟಿಸಲಾದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ರಾಯುಡು ಮುಂಚೂಣಿಯಲ್ಲಿದ್ದರು. ಬಳಿಕ ಶಿಖರ್‌ ಧವನ್‌ ಗಾಯಗೊಂಡಾಗ ಅವರ ಸ್ಥಾನಕ್ಕೆ ರಿಷಭ್‌ ಪಂತ್‌ ಅವರನ್ನು ಬದಲಿ ಆಟಗಾರನಾಗಿ ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ರಾಯುಡು ಮತ್ತೊಮ್ಮೆ ಅವಕಾಶ ವಂಚಿತರಾದರು. ಇದರಿಂದ ಬೇಸರಗೊಂಡು ಹಠಾತ್‌ ನಿವೃತ್ತಿ ಪ್ರಕಟಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top