fbpx
ಸಮಾಚಾರ

ಸಂಸತ್ ನಲ್ಲಿ ಕಿಚ್ಚು ಹಚ್ಚಿದ್ದ ಟಿಎಂಸಿ ಸಂಸದೆಯ ಭಾಷಣ ಕದ್ದ ಸರಕೇ?

ಪಶ್ಚಿಮ ಬಂಗಾಳದ ಕೃಷ್ಣನಗರದ ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಮಾಡಿದ ಚೊಚ್ಚಲ ಭಾಷಣ ದೇಶದ ವಾಸ್ತವ ಪರಿಸ್ಥಿತಿಯನ್ನು ತೆರದಿಟ್ಟಿದ್ದಲ್ಲದೆ, ಎಲ್ಲಡೆ ವೈರಲ್ ಆಗಿದೆ.ದೇಶದ ಹಲವು ವಿಶ್ವಾಸಾರ್ಹ ಮೀಡಿಯಾಗಳು ಮಹುನಾರ ಭಾಷಣವನ್ನು ಅರ್ಥಪೂರ್ಣ ಎಂದು ಬಣ್ಣಿಸಿವೆ. ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಮಹುನಾರ ಭಾಷಣವನ್ನು ‘ವರ್ಷದ ಭಾಷಣ’ ( Speech of the Year) ಎಂದು ಗುರುತಿಸಿದೆ.

ಈ ನಡುವೆ ಮೊಯಿತ್ರಾ ಅವರ ಭಾಷಣ ಅಮೇರಿಕ ವೆಬ್ ಸೈಟ್ ಒಂದರಿಂದ ಕದ್ದಿರುವುದು ಎಂದು ಜೀ ನ್ಯೂಸ್ ವರದಿ ಮಾಡಿದೆ. ಮಹುವಾ ಮೊಯಿತ್ರ ತನ್ನ ಭಾಷಣ ಅಮೇರಿಕಾದ ವೆಬ್ಸೈಟ್ ‘ವಾಷಿಂಗ್ಟನ್ ಮಂತ್ಲೀ’ ಯಲ್ಲಿ ಲೇಖಕ ಮಾರ್ಟಿನ್ ಲಾಂಗ್ಮಾನ್ ಅವರ ಲೇಖನದ ಕೆಲವು ಅಂಶಗಳನ್ನು ಮೂಲವನ್ನುಲ್ಲೇಖಿಸದೆ ಉಪಯೋಗಿಸಿದ್ದಾರಂತೆ! ಇದಕ್ಕೆ ಸಾಕ್ಷಿಯಾಗಿ ಅವರ ಭಾಷಣದ ತುಣುಕು ಹಾಗೂ ವಾಷಿಂಗ್ಟನ್ ಮಂತ್ಲೀ ಲೇಖನದವನ್ನೂ ತನ್ನ ಕಾರ್ಯಕ್ರಮದಲ್ಲಿ ಎಂದು ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ವಿಶೇಷ ಕಾರ್ಯಕ್ರಮವೊಂದರಲ್ಲಿ ತೋರಿಸಿದ್ದಾರೆ.

“ವಾಷಿಂಗ್ಟನ್ ಮಂತ್ಲೀಯಲ್ಲಿ ಲೇಖಕ ಮಾರ್ಟಿನ್ ಲಾಂಗ್ಮಾನ್ ಅಮೇರಿಕಾದ ಅಧ್ಯಕ್ಷ ಟ್ರಂಪ್ ಕುರಿತು ತನ್ನ ವಿಮರ್ಷೆಯಲ್ಲಿ, ಇದೇ 14 ಲಕ್ಷಣಗಳಿಂದ 12 ಲಕ್ಷಣಗಳ ಬಗ್ಗೆ ವಿವರಿಸಿದ್ದರು. ಈಗ ಮೊಯಿತ್ರಾ ಕೂಡ ಇದೆ ಅಂಶವನ್ನು ಕಾಪಿ ಮಾಡಿ ಸಂಸತ್ ನಲ್ಲಿ ಭಾಷಣ ಮಾಡಿದ್ದಾರೆ” ಎಂದು ಚೌದರಿ ಹೇಳಿದ್ದಾರೆ.

ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮೇರಿಕಾದ ಲೇಖಕ ಮಾರ್ಟಿನ್ ಲಾಂಗ್ಮಾನ್, ತನ್ನ ಟ್ವೀಟರ್ ನಲ್ಲಿ ಈ ಬಗ್ಗೆ ಬರೆಯುತ್ತಾ, “ಬಲಪಂಥೀಯರು ಎಲ್ಲಾ ದೇಶಗಳಲ್ಲೂ ಒಂದೇ ಥರಾ.. ಮಹುವಾ ಮೋಯಿತ್ರ ಮೇಲೆ ಕೃತಿಚೌರ್ಯದ ಆರೋಪ ತಪ್ಪು ಹಾಗೂ ಹಾಸ್ಯಾಸ್ಪದವಾಗಿದೆ. ಅವರು ನನ್ನ ಕೃತಿಯನ್ನು ಕದ್ದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top