fbpx
ಸಮಾಚಾರ

ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಅಭಿಮಾನಿಗಳು ಸ್ಟೇಡಿಯಂನಿಂದ ಹೊರಕ್ಕೆ.

ಕೆಲವು ದಿನಗಳ ಹಿಂದೆಯಷ್ಟೇ ಭಾರತ- ಶ್ರೀಲಂಕಾ ನಡುವಣ ಪಂದ್ಯದ ವೇಳೆ ಭಾರತ ವಿರೋಧಿ ಬ್ಯಾನರ್ ಅಂಟಿಸಿದ ವಿಮಾನವೊಂದು ಸ್ಟೇಡಿಯಂ ಮೇಲಿಂದ ಹಾರಾಡಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತಲ್ಲದೆ ಬಿಸಿಸಿಐ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಇದಾದ ಬೆನ್ನಲ್ಲೇ ಮಗದೊಂದು ವಿವಾದ ಹುಟ್ಟಿಕೊಂಡಿದೆ.

 

 

ನ್ಯೂಜಿಲೆಂಡ್ ವಿರುದ್ಧ ಪಂದ್ಯದ ವೇಳೆ ಭಾರತ ವಿರೋಧಿ ಬ್ಯಾನರ್ ಹಾಗೂ ಟಿ-ಶರ್ಟ್ ಧರಿಸಿದ ನಾಲ್ವರು ಸಿಖ್ ಪ್ರತ್ಯೇಕತಾವಾದಿಗಳನ್ನು ಸ್ಟೇಡಿಯಂನಿಂದ ತೆರವುಗೊಳಿಸಿ ಪೊಲೀಸರಿಗೆ ಹಸ್ತಾಂತರಿಸಿರುವ ಘಟನೆ ನಡೆದಿದೆ. ಹೊರಹಾಕಲಾದ ಎಲ್ಲ ಪ್ರೇಕ್ಷಕರು ಯುವಕರಗಿದ್ದು, ಸಿಖ್ ಧರ್ಮಕ್ಕೆ ಸೇರಿದವರಾಗಿದ್ದಾರೆ.

ಇವರು ತಮ್ಮ ಟೀ ಶರ್ಟ್ ಮೇಲೆ ಸಿಖ್‍ರಿಗೆ ಪ್ರತ್ಯೇಕ ರಾಜ್ಯಬೇಕು ಎಂಬ ಸಂದೇಶವಿರುವ ಬಟ್ಟೆ ಹಾಕಿದ್ದರು. ಕ್ರೀಡಾಂಗಣದಲ್ಲಿ ಈ ರೀತಿಯ ಸಂದೇಶವಿರುವ ಬಟ್ಟೆ ಧರಿಸಲು ಅನುಮತಿ ಇಲ್ಲದ ಕಾರಣ ಅವರನ್ನು ಹೊರಹಾಕಲಾಗಿದೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿಯೊಬ್ಬರು “4 ಜನ ಸಿಖ್ ಧರ್ಮದ ಯುವಕರು ರಾಜಕೀಯ ಸಂದೇಶವಿರುವ ಟೀ ಶರ್ಟ್‍ಗಳನ್ನು ಧರಿಸಿ ಮೈದಾನಕ್ಕೆ ಬಂದಿದ್ದರು. ಇದಕ್ಕೆ ಅನುಮತಿ ಇಲ್ಲದ ಕಾರಣ ಮೈದಾನದ ಸಿಬ್ಬಂದಿ ಅವರನ್ನು ಕರೆದುಕೊಂದು ಬಂದು ನಮಗೆ ಒಪ್ಪಿಸಿದ್ದಾರೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top