fbpx
ಸಮಾಚಾರ

ಲಂಡನ್‍ನಲ್ಲಿ ನಟ ಶಿವರಾಜ್‌ಕುಮಾರ್‌ಗೆ ಶಸ್ತ್ರಚಿಕಿತ್ಸೆ– ಇತ್ತ ಅಭಿಮಾನಿಗಳಿಂದ ಹೋಮ, ವಿಶೇಷ ಪೂಜೆ.

ನಟ ಶಿವರಾಜ್‍ಕುಮಾರ್ ಅವರಿಗೆ ಲಂಡನ್‍ನಲ್ಲಿ ಇಂದು ಶಸ್ತ್ರ ಚಿಕಿತ್ಸೆ ನಡೆಯಲಿದ್ದು ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಲಿ ಎಂದು ಆಶಿಸಿ ಅಭಿಮಾನಿಗಳು ಹೋಮ, ಹವನ ಮಾಡಿಸುತ್ತಿದ್ದಾರೆ.

ಹೌದು, ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಇಂದು ಲಂಡನ್‍ನಲ್ಲಿ ಶಿವರಾಜ್ ಕುಮಾರ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ `ಶಿವರಾಜ್ ಕುಮಾರ್ ಸೇನಾ ಸಮಿತಿ’ ಶಸ್ತ್ರಚಿಕಿತ್ಸೆ ಯಶಸ್ವಿ ಆಗಲಿ ಎಂದು ಗವಿಪುರಂ ಶಿವನ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ಮಾಡಿಸುತ್ತಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹಾಗೂ ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಈ ಮೊದಲು ಲಂಡನ್‌ನಲ್ಲಿ ಟ್ರೀಟ್ಮೆಂಟ್ ಮಾಡಿದ್ದ ವೈದ್ಯರೇ ನಟ ಶಿವಣ್ಣ ಅವರನ್ನು ಟ್ರೀಟ್ ಮಾಡಲಿದ್ದಾರಂತೆ.

ಅಭಿಮಾನಿಗಳಿಗೆ ನಿರಾಸೆ:
ಇನ್ನು ಸುಮಾರು ಮೂರು ದಶಕಗಳಿಂದ ನಟ ಶಿವರಾಜಕುಮಾರ್‌ ಕೂಡ ತಮ್ಮ ಬರ್ತ್‌ಡೇಯನ್ನು ಅಭಿಮಾನಿಗಳ ಸಮ್ಮುಖದಲ್ಲೇ ಆಚರಿಸಿಕೊಂಡು ಈ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅದ್ಧೂರಿ ಅಲ್ಲದಿದ್ದರೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದೂ ಇದೆ. ಆದರೆ ಈ ಬಾರಿ ಮಾತ್ರ ಈ ಸಂಪ್ರದಾಯ ಸ್ವಲ್ಪ ಬದಲಾಗುವ ಸಾಧ್ಯತೆ ಇದೆ

ಜುಲೈ 12 ರಂದು ಶಿವರಾಜ್ ಕುಮಾರ್ ಅವರ 57ನೇ ವರ್ಷದ ಹುಟ್ಟುಹಬ್ಬವಿದೆ. ಈ ಬಾರಿ ಶಿವಣ್ಣ ಹುಟ್ಟು ಹಬ್ಬ ಆಚರಿಸಲು ಅವಕಾಶ ಸಿಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಒಂದು ತಿಂಗಳು ಲಂಡನ್‌ನಲ್ಲೇ ಇದ್ದು ಚಿಕಿತ್ಸೆ ಪಡೆದ ಬಳಿಕ ತವರಿಗೆ ಮರಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top