fbpx
ಸಮಾಚಾರ

ಹೊಸ ನಿಯಮ- ಮದ್ಯದಂಗಡಿಗಳು ರಾತ್ರಿ 10 ಗಂಟೆ ಬದಲು, ಸಂಜೆ 6 ಗಂಟೆಗೇ ಮುಚ್ಚಬೇಕಿದೆ.

ಈ ರಾಜ್ಯದಲ್ಲಿ ಇನ್ನು ಮುಂದೆ ಸಂಜೆ ಆರು ಗಂಟೆ ನಂತರ ಎಣ್ಣೆ ಸಿಗಲ್ಲ! ಮದ್ಯಪ್ರಿಯರಿಗೆ ರಾಜ್ಯ ಸರಕಾರ ಭರ್ಜರಿ ಶಾಕ್ ನೀಡಿದೆ. ಆಂಧ್ರದಲ್ಲಿ ಹೊಸ ನೀತಿ ಜಾರಿಗೆ ಸಿದ್ಧತೆ ಆರಂಭವಾಗಿದೆ. ಹೌದು ಆಂಧ್ರಪ್ರದೇಶ ಸರಕಾರ ಹೊಸ ಚಿಂತನೆ ಮಾಡಿದ್ದು ಈ ಮೊದಲು ರಾತ್ರಿ 10 ಗಂಟೆಗೆ ಬಂದ್ ಆಗುತ್ತಿದ್ದ ಮದ್ಯದಂಗಡಿಗಳು ಇನ್ನು ಮುಂದೆ ಸಂಜೆ 6 ಗಂಟೆಗೆ ಬಂದ್ ಆಗಲಿವೆ.

ಆಂಧ್ರ ಪ್ರದೇಶದಲ್ಲಿ ಜಗನ ಮೋಹನ್ ರೆಡ್ಡಿ ಸರ್ಕಾರ ಪರಿಷ್ಕೃತ ಅಬಕಾರಿ ನೀತಿ ಜಾರಿಗೆ ತರಲು ಮುಂದಾಗಿದೆ. ಈ ಹೊಸ ನಿಯಮದ ಪ್ರಕಾರ ಮದ್ಯದಂಗಡಿಗಳು ರಾತ್ರಿ 10 ಗಂಟೆ ಬದಲಾಗಿ, ಸಂಜೆ 6 ಗಂಟೆಗೇ ಬಾಗಿಲು ಮುಚ್ಚಬೇಕಿದೆ. ಹೊಸ ನಿಯಮ ಜಾರಿಗೆ ಬಂದಿದ್ದೆ ಆದಲ್ಲಿ ಕುಡುಕರಿಗೆ ಸಮಸ್ಯೆ ಆಗದಿದ್ದರೂ, ಕೊಂಚ ಕಡಿವಾಣ ಬೀಳಲಿದೆ ಎಂಬುದು ಅಬಕಾರಿ ಇಲಾಖೆಯ ಯೋಜನೆಯಾಗಿದೆ.

ಸಂಜೆ 6 ರ ನಂತರವೇ ಮದ್ಯವನ್ನು ಕುಡಿಯಲು ಇಷ್ಟಪಡುತ್ತಾರೆ, ಹಾಗಾಗಿ ಸಂಜೆ ಸಮಯದಲ್ಲಿಯೇ ಹೆಚ್ಚು ಜನರು ಮದ್ಯ ಸೇವನೆ ಮಾಡುತ್ತಿದ್ದಾರೆ. . ಇದರಿಂದ ಉಳಿದ ವ್ಯಾಪಾರ-ವಹಿವಾಟು ಇಳಿಮುಖವಾಗಿದ್ದು 6 ಗಂಟೆಗೆ ಲಿಕ್ಕರ್ ಶಾಪ್ ಬಂದ್ ಮಾಡುವ ಆಲೋಚನೆ ಸರಕಾರದ್ದಾಗಿದೆ.

ಅಂದಹಾಗೆ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶವನ್ನು ಮದ್ಯ ಮುಕ್ತ ಮಾಡುವುದಾಗಿ ಚುನಯನೆಯ ಸಂದರ್ಭದಲ್ಲಿ ಜಗನ್ ಮೋಹನ್ ರೆಡ್ಡಿ ಆಸ್ವಾಸನೆ ನೀಡಿದ್ದರು., ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇತ್ತೀದ್ದಾರೆ ಎಂದು ಆಂಧ್ರ ಜನರು ಮಾತನಾಡಿಕೊಳ್ಳುತ್ತೀದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top