fbpx
ಸಮಾಚಾರ

ಮೊಹಮ್ಮದ್ ಶಮಿ ವಿರುದ್ಧ ಮಹಿಳೆಯಿಂದ ಕಿರುಕುಳ ಆರೋಪ- ಶಮಿ ವಿರುದ್ಧ ನೆಟ್ಟಿಗರು ಗರಂ.

ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಮಹಿಳೆಯರನ್ನೇ ಫಾಲೋ ಮಾಡುತ್ತಾನೆ. ಆತ ಲಫಂಗಾ ಎಂದು ಜರಿದಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮಹಿಳೆಯೊಬ್ಬರು ಶಮಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

 

ಕಳೆದ ವರ್ಷ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದ ನಂತರ ಸ್ವತಃ ಪತ್ನಿಯೇ ಶಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಸೋಫಿಯಾ ಎಂಬ ಮಹಿಳೆ ಶಮಿ ಮೇಲೆ ಹೊಸ ಆರೋಪ ಮಾಡಿದ್ದಾರೆ. “ವಿನಾಃ ಕಾರಣ ಮೊಹಮ್ಮದ್ ಶಮಿ ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. 1.4 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಅವರು ನನ್ನೊಬ್ಬಳಿಗೇಕೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

 

 

ಮೊಹಮ್ಮದ್ ಶಮಿ ಟಿಕ್ ಟಾಕ್ ಅಕೌಂಟ್ ತೆರೆದಿದ್ದಾನೆ. ಆತ ಒಟ್ಟಾರೆ 97 ಮಂದಿಯನ್ನು ಫಾಲೋ ಮಾಡುತ್ತಿದ್ದು ಅದರಲ್ಲಿ 90 ಮಂದಿ ಹುಡುಗಿಯರದ್ದೆ. ಒಂದು ಮಗುವಿನ ತಂದೆಯಾಗಿ ಇದು ನಾಚಿಕೆಗೇಡು. ಆತ ಲಫಂಗ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಸೋಫಿಯಾ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಮಿ ವಿರುದ್ಧ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top