fbpx
ಸಮಾಚಾರ

ವಿಜ್ಞಾನಿಯಾಗ್ತಿದ್ದಾರೆ ದರ್ಶನ್ ‘ಯಜಮಾನ’ ಚಿತ್ರದ ಬಸಣ್ಣಿ.

ಕನ್ನಡದ ‘ಯಜಮಾನ’ ಚಿತ್ರದ ಬಸಣ್ಣಿ ಖ್ಯಾತಿಯ ನಟಿ ತಾನ್ಯಾ ಹೋಪ್ ತಾವು ಮತ್ತೆ ಟಾಲಿವುಡ್ ನಲ್ಲಿ ಕಮಾಲ್ ಮಾಡಲು ಉತ್ಸುಕರಾಗಿದ್ದಾರೆ. ಆನಂದ್ ವಿಐ ನಿರ್ದೇಶನದ ಚಿತ್ರ “ಡಿಸ್ಕೋರಾಜ” ದಲ್ಲಿ ತಾನ್ಯಾ ರವಿತೇಜ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ತಾನ್ಯಾ ಹಾಪ್ ಅವರು ವಿಜ್ಞಾನಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

“ನಾನು ತೆಲುಗು ಚಿತ್ರರಂಗಕ್ಕೆ ಮರಳಿದ್ದೇನೆ. ರವಿತೇಜ ನಟನೆಯ ಚಿತ್ರದಲ್ಲಿ ಕೆಲಸ ಮಾಡುವುದು ಸಂತಸದ ಸಂಗತಿ” ತಾನ್ಯಾ ಹೇಳಿದ್ದಾರೆ. ಆಕೆ ಚಿತ್ರದಲ್ಲಿ ತನ್ನ ಪಾತ್ರದ ಕುರಿತು ಹೆಚ್ಚು ವಿವರ ನೀಡದೆ ಹೋದರೂ ತಾವು ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಹಾಗೆ ನೋಡಿದರೆ ತಾನ್ಯಾ ಹೋಪ್ ಅವರಿಗೆ ಇದು ನಾಲ್ಕನೇ ತೆಲುಗು ಸಿನಿಮಾ. ಇದೇ ಚಿತ್ರದಲ್ಲಿ ಮತ್ತೋರ್ವ ಕನ್ನಡತಿ ಕೂಡ ನಟಿಸುತ್ತಿದ್ದಾರೆ. ಅವರೇ ನಭಾನಟೇಶ್. ಒಟ್ಟು ಮೂವರು ನಾಯಕಿಯರು ಚಿತ್ರದಲ್ಲಿದ್ದು, ಇಬ್ಬರು ಕನ್ನಡದವರೇ ಎಂಬುದು ವಿಶೇಷ. ಆನಂದ್ ವಿ ಐ ‘ಡಿಸ್ಕೋ ರಾಜ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top