fbpx
ಸಮಾಚಾರ

“ನನ್ನನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಲಾಗಿದೆ” ಅಣ್ಣಾ ಹಜಾರೆ ಸ್ಪೋಟಕ ಹೇಳಿಕೆ.

ನನ್ನನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಲಾಗಿತ್ತು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಒಸ್ಮಾನಾಬಾದ್ ಸಕ್ಕರೆ ಕೈಗಾರಿಕೆಯ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದಕ್ಕೆ ನನ್ನ ಕೊಲೆಗೆ ಸುಪಾರಿ ಕೊಡಲಾಗಿದೆ ಎಂದು ಮುಂಬೈ ಸಿಬಿಐ ಕೋರ್ಟ್‍ಗೆ ಹಜಾರೆ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಪವನ್ ರಾಜೆ ನಿಂಬಾಳ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮುಂಬೈಯ ವಿಶೇಷ ನ್ಯಾಯಾಲಯದೆದುರು ಸಾಕ್ಷಿಯಾಗಿ ಹಾಜರಾದ ಅಣ್ಣಾ ಹಜಾರೆ, ವಿಚಾರಣೆಯ ಸಂದರ್ಭದಲ್ಲಿ ತಮಗೂ ಕೊಲೆ ಬೆದರಿಕೆ ಬಂದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಾವು ಪೊಲೀಸರಿಗೆ ದೂರನ್ನೂ ನೀಡಿರುವುದಾಗಿ ಅವರು ಹೇಳಿದ್ದಾರೆ.

ಒಸ್ಮಾನಾಬಾದ್‌ನ ತೆರ್ನಾ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಕಾರಣಕ್ಕೆ ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು. ಪ್ರಕರಣದ ಆರೋಪಿ ಪಾಟೀಲ್ ನನಗೆ ಬೆದರಿಕೆ ಹಾಕಿದರು ಮತ್ತು ಈ ವಿಷಯದಲ್ಲಿ ನನ್ನ ದೂರುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಒಮ್ಮೆ ಅವರ ಜನರು ನನ್ನ ಕಚೇರಿಗೆ ಬಂದು ಖಾಲಿ ಚೆಕ್ ನೀಡಿದರು ಎಂದು ಹೇಳಿಕೆ ನೀಡಿದ್ದಾರೆ.

ಅಂದಹಾಗೆ ಒಸ್ಮಾನಾಬಾದ್‌ನ ತೆರ್ನಾ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ ಕಾರಣಕ್ಕೆ ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು. ಪ್ರಕರಣದ ಆರೋಪಿ ಪಾಟೀಲ್ ನನಗೆ ಬೆದರಿಕೆ ಹಾಕಿದರು ಮತ್ತು ಈ ವಿಷಯದಲ್ಲಿ ನನ್ನ ದೂರುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದರು. ಒಮ್ಮೆ ಅವರ ಜನರು ನನ್ನ ಕಚೇರಿಗೆ ಬಂದು ಖಾಲಿ ಚೆಕ್ ನೀಡಿದರು ಎಂದು ಹೇಳಿಕೆ ನೀಡಿದ್ದಾರೆ.

‘ನಿಂಬಾಳ್ಕರ್‌ ಕೊಲೆ ಬಗ್ಗೆ ಅಣ್ಣಾ ಹಜಾರೆ ಅವರಿಗೆ ಮಾಹಿತಿ ಇತ್ತು. ಹಾಗಾಗಿ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ, ವಿಚಾರಣೆ ನಡೆಸಬೇಕು,’ ಎಂದು ಮೃತ ನಿಂಬಾಳ್ಕರ್‌ ಪತ್ನಿ ಆನಂದಿದೇವಿ ಅವರು ನ್ಯಾಯಾಲಯವನ್ನು ಕೋರಿದ್ದರು. ಆದರೆ, ಅದನ್ನು ಬಾಂಬೆ ಹೈಕೋರ್ಟ್‌ ತಳ್ಳಿ ಹಾಕಿತ್ತು. ನಂತರ ಆನಂದಿದೇವಿ ಅವರು ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಅಣ್ಣಾ ಹಜಾರೆ ಅವರನ್ನೂ ಸಾಕ್ಷಿಯಾಗಿ ಪರಿಗಣಿಸುವಂತೆ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರು ಮಂಗಳವಾರ ಸಿಬಿಐ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top