fbpx
ಸಮಾಚಾರ

ವಿಭಿನ್ನವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಗೆದ್ದ ಯುವರಾಜ್ ಸಿಂಗ್

ಇಂಟರ್​ನೆಟ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಬಾಟಲ್ ಕ್ಯಾಪ್ ಚಾಲೆಂಜ್​ಗೆ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಫುಲ್ ಫಿದಾ ಆಗಿದ್ದು ಗೊತ್ತೆ ಇದೆ ,ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಾಟಲ್ ಕ್ಯಾಪ್ ಚಾಲೆಂಜ್​ಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ವೃತ್ತಿ ಜೀವನಕ್ಕೆ ವಿದಾಯ ಹೇಳಿಕ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುವ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಹರಿಬಿಟ್ಟಿದ್ದಾರೆ.

ಬ್ಯಾಟಿಂಗ್ ಮಾಡಿ ಚೆಂಡನ್ನು ಬಾಟಲ್ ಕ್ಯಾಪ್‍ಗೆ ಬಡಿಯುವಂತೆ ಮಾಡಿ ವಿಡಿಯೋ ಮಾಡಿದ್ದಾರೆ. ಕ್ರಿಕೆಟ್​ ಬ್ಯಾಟ್ ಹಿಡಿದು ಚೆಂಡಿಗೆ ಸ್ಟ್ರೇಟ್​ ಡ್ರೈವ್ ಶಾಟ್ ಹೊಡಿದಿದ್ದಾರೆ. ಆ ಚೆಂಡು ನೇರವಾಗಿ ಬಾಟಲಿಗೆ ತಗುಲಿ ಕ್ಯಾಪ್​ ಸಮೇತ ಬಾಟಲಿ ಕೆಳಗೆ ಬಿದ್ದಿದೆ. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಯುವಿ, ಬಾಟಲ್ ಕ್ಯಾಪ್ ಚಾಲೆಂಜ್‍ಗೆ ಇದು ನನ್ನ ಮಾದರಿ. ಸಚಿನ್, ಲಾರಾ, ಶಿಖರ್ ಧವನ್, ಗೇಲ್ ಅವರಿಗೆ ಚಾಲೆಂಜ್ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಏನಿದು ಚಾಲೆಂಜ್?
ಒಂದು ಟೇಬಲ್ ಮೇಲೆ ಒಂದು ಬಾಟಲಿ ಇಡಬೇಕು. ಅದರ ಮುಚ್ಚಳವನ್ನು ಬಾಟಲ್ ಮೇಲೆ ಸಡಿಲವಾಗಿ ತಿರುಗಿ ಇಡಬೇಕು. ನಂತರ ಚಾಲೆಂಜ್ ಸ್ವೀಕರಿಸಿದವರು ಸ್ವಲ್ಪ ದೂರದಲ್ಲಿ ನಿಂತು ಒಂದು ಸುತ್ತು ತಿರುಗಿ ಕಾಲಿನಿಂದ ಬಾಟಲಿ ಕ್ಯಾಪನ್ನು ಒದಿಯಬೇಕು. ಈ ಪ್ರಕ್ರಿಯೆಯಲ್ಲಿ ಬಾಟಲಿ ಕೆಳಗೆ ಬೀಳಬಾರದು. ಹೀಗೆ ಬಾಟಲ್ ಬೀಳದಂತೆ ಕ್ಯಾಪ್ ಮಾತ್ರ ಕೆಳಗೆ ಬೀಳಿಸಿದರೆ ಈ ಚಾಲೆಂಜ್ ಗೆದ್ದಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top