fbpx
ಸಮಾಚಾರ

‘ಮುನಿರತ್ನ ಕುರುಕ್ಷೇತ್ರ’ ಟ್ರೇಲರ್ ನಲ್ಲಿ ಕನ್ನಡ ಪದ ತಪ್ಪಾಗಿ ಬಳಕೆ.

ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮೂಲಕ ಅಸಮಾಧಾನ ಹೊರಹಾಕಿರುವ ಅಭಿಮಾನಿಗಳು, ಈ ಹಿಂದಿನ ಟೀಸರ್​ಗಳನ್ನೇ ಜೋಡಿಸಿ ನಿರ್ಮಾಪಕ ಮುನಿರತ್ನ ಅವರು ಟ್ರೈಲರ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ದರ್ಶನ್ 50ನೇ ಸಿನಿಮಾ ಹಾಗೂ ಒಂದು ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಎಂಬ ಕಾರಣಕ್ಕೆ ‘ಕುರುಕ್ಷೇತ್ರ’ ಟ್ರೇಲರ್ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೆ, ದರ್ಶನ್ ಅಭಿಮಾನಿಗಳಿಗೆ ಟ್ರೇಲರ್ ನಿರಾಸೆ ಮೂಡಿಸಿದೆ.

 

 

ಟ್ರೇಲರ್‌ನಲ್ಲಿ ಅಭಿಮಾನಿಗಳನ್ನು ತೃಪ್ತಿಪಡಿಸುವಲ್ಲಿ ವಿಫಲವಾಗಿದೆ. ಟ್ರೇಲರ್ ಪೂರ್ತಿ ಮುನಿರತ್ನ ಹೆಸರೇ ಕಾಣುತ್ತದೆ ಹೊರತು ಯಾವ ಹೊಸತನವೂ ಕಾಣುವುದಿಲ್ಲ. ನಿರೀಕ್ಷೆ ಹುಟ್ಟಿಸಿದಷ್ಟು ಟ್ರೇಲರ್ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಮೂಡಿದೆ. ಎರಡು ಟೀಸರ್ ಸೇರಿಸಿ ಮಾಡಿರುವ ಟ್ರೇಲರ್ ಇದು ಎಂದು ಟ್ರೋಲ್ ಮಾಡಲಾಗುತ್ತಿದೆ.

ತಪ್ಪು ಕನ್ನಡ:
ಇನ್ನು ಟ್ರೈಲರ್‌ನಲ್ಲಿ ಮೊದಲು ಬರುವ ಸಾಲುಗಳಲ್ಲಿ ಕನ್ನಡ ಪದ ತಪ್ಪಾಗಿ ಬಳಕೆ ಆಗಿದ್ದು ಆನಂತರ ಅದನ್ನು ತಿದ್ದಲಾಗಿದೆ. ‘ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಗತಿನ ಚಲನಚಿತ್ರ ರಂಗದಲ್ಲೇ’ ಎಂಬ ಸಾಲಿದ್ದು ಅದರಲ್ಲಿ ‘ಜಗತ್ತು’ ಎಂದು ಬರೆಯುವ ಬದಲು ಜಗತು ಎಂದು ತೋರಿಸಲಾಗಿತ್ತು. ಇದನ್ನು ಗಮನಿಸಿದ ಅಭಿಮಾನಿಗಳು ಪದ ಬಳಕೆ ತಪ್ಪಾಗಿದೆ. ಸರಿ ಮಾಡಿ ಎಂದು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top