fbpx
ಸಮಾಚಾರ

ಫುಟ್‌ಬಾಲ್‌ ಸೂಪರ್ ಸ್ಟಾರ್ ಮೆಸ್ಸಿ ದಾಖಲೆ ಮುರಿದ ಭಾರತದ ನಾಯಕ ಸುನಿಲ್ ಚೆಟ್ರಿ!

ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹೊಸ ದಾಖಲೆ ಬರೆದಿದ್ದಾರೆ. ದಿಗ್ಗಜ ಫುಟ್ಬಾಲ್ ಪಟು ಲಿಯೊನಲ್ ಮೆಸ್ಸಿ ಸಾಧನೆ ಹಿಂದಿಕ್ಕಿ ಇದೀಗ 2ನೇ ಸ್ಥಾನಕ್ಕೇರಿದ್ದಾರೆ. ತಜಕಿಸ್ತಾನ ವಿರುದ್ಧದ ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಭಾರತ ಸೋಲು ಕಂಡಿದೆ. ಆದರೆ ನಾಯಕ ಸುನಿಲ್ ಚೆಟ್ರಿ ದಾಖಲೆ ಬರೆದಿದ್ದಾರೆ.

 

 

 

 

2-4 ಅಂತರದಿಂದ ಸೋಲು ಕಂಡ ಭಾರತಕ್ಕೆ ಸುನಿಲ್ ಚೆಟ್ರಿ ಐತಿಹಾಸಿಕ ಸಾಧನೆ ಸಮಾಧಾನ ತಂದಿದೆ. ತಜಿಕಸ್ತಾನ ವಿರುದ್ಧ 2 ಗೋಲು ಸಿಡಿಸಿದ ಚೆಟ್ರಿ, ಅರ್ಜೆಂಟೀನಾದ ದಿಗ್ಗಜ ಲಿಯೊನಲ್ ಮೆಸ್ಸಿ ದಾಖಲೆ ಪುಡಿ ಮಾಡಿದ್ದಾರೆ. ಚೆಟ್ರಿ ತಮ್ಮ ವೃತ್ತಿ ಜೀವನದ 70ನೇ ಗೋಲ್ ದಾಖಲಿಸುವ ಮೂಲಕ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿಯ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಅರ್ಜೆಂಟೀನಾದ ಸ್ಟಾರ್ ಆಟಗಾರ ಮೆಸ್ಸಿಯೊಂದಿಗೆ 69 ಗೋಲುಗಳಿಂದ ಸಮಬಲ ಹೊಂದಿದ್ದ ಚೆಟ್ರಿ, ತಾನು ಕೂಡ ವಿಶ್ವದ ಅತ್ಯುತ್ತಮ ಆಟಗಾರನೆಂದು ನಿರೂಪಿಸಿದ್ದಾರೆ.

2ನೇ ಸ್ಥಾನದಲ್ಲಿರುವ ಮೆಸ್ಸಿ ಇಲ್ಲಿಯವರೆಗೆ ಒಟ್ಟು 69 ಗೋಲುಗಳನ್ನೂ ದಾಖಲಿಸಿದ್ದಾರೆ. ಆದರೀಗ ಚೆಟ್ರಿ 70 ಗೋಲು ಗಳಿಸುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು 85 ಗೋಲುಗಳನ್ನು ದಾಖಲಿಸಿರುವ ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಒಟ್ಟಿನಲ್ಲಿ ಇದುವರೆಗೂ ಭಾರತದ ಯಾವ ಫುಟ್ಬಾಲ್ ಆಟಗಾರನು ಮಾಡದ ಸಾಧನೆಯನ್ನು ಸುನೀಲ್ ಚೆಟ್ರಿ ಅವರು ಮಾಡಿರುವುದು ಭಾರತೀಯರೆಲ್ಲರಿಗೂ ಖುಷಿ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top