fbpx
ಸಮಾಚಾರ

“ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ, ಐವರ ರಾಜೀನಾಮೆಯಷ್ಟೇ ಕ್ರಮಬದ್ಧ” ರಮೇಶ್ ಕುಮಾರ್ ಸ್ಪೀಕರ್ ಸ್ಪಷ್ಟನೆ

ಅತೃಪ್ತ ಶಾಸಕರ ರಾಜೀನಾಮೆಯನ್ನು ತುರ್ತು ಅಂಗೀಕಾರ ಮಾಡುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶಾಸಕರು ನೀಡಿರುವ ರಾಜೀನಾಮೆ ಪರಿಶೀಲಿಸಿ ಮಾತನಾಡಿದ ಅವರು, ‘ಯಾವ ಶಾಸಕರು ರಾಜೀನಾಮೆ ಕೊಡುವ ಮೊದಲು ಪೂರ್ವಾನುಮತಿ ಪಡೆದಿರಲಿಲ್ಲ. ಅವರು ರಾಜೀನಾಮೆ ಕೊಡಲು ಬರುವ ವಿಷಯವೇ ನನಗೆ ತಿಳಿದಿರಲಿಲ್ಲ. ಹಾಗಾಗಿ ಕಚೇರಿ ಕೆಲಸದ ಮೇಲೆ ನಾನು ಹೊರಗೆ ತೆರಳಿದ್ದೆ’ ಎಂದು ಹೇಳಿದರು.

ಶನಿವಾರ ಮಧ್ಯಾಹ್ನದವರೆಗೂ ನಾನು ಕಚೇರಿಯಲ್ಲಿ ಇದ್ದೆ. ನಾನಿಲ್ಲದ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ತುರ್ತಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ದಿನಗಳ ನಂತರ ನಾನು ಕಚೇರಿಗೆ ಬಂದಿದ್ದೇನೆ. ಈಗ ಹೋಗಿ ನೋಡಿ ರಾಜೀನಾಮೆ ಪರಿಶೀಲನೆ ನಡೆಸುತ್ತೇನೆ ಎಂದರು.

13 ರಾಜೀನಾಮೆಗಳಲ್ಲಿ 5 ಪತ್ರಗಳನ್ನು ಹೊರತುಪಡಿಸಿ ಅಂದ್ರೆ ಆನಂದ್ ಸಿಂಗ್, ನಾರಾಯಣ ಗೌಡ, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ ಹಾಗೂ ರಾಮಲಿಂಗಾ ರೆಡ್ಡಿ ಇವರು ನಮ್ಮ ನಿಯಮಾವಳಿಯಂತೆ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ಉಳಿದ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರಿಗೆ ನಮ್ಮ ಕಚೇರಿಯಿಂದ ತಿಳುವಳಿಕೆ ಕೊಟ್ಟಿದ್ದೇವೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top