fbpx
ಸಮಾಚಾರ

‘ಮುನಿರತ್ನ ಕುರುಕ್ಷೇತ್ರ’ ಟ್ರೇಲರ್ ವಿರುದ್ಧ ದರ್ಶನ್ ಫ್ಯಾನ್ಸ್ ಬೇಸರ: ಇದಕ್ಕಿಂತ ದಾರಾವಾಹಿಯೇ ಬೆಸ್ಟ್​ ಎಂದ ಅಭಿಮಾನಿಗಳು.

ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮೂಲಕ ಅಸಮಾಧಾನ ಹೊರಹಾಕಿರುವ ಅಭಿಮಾನಿಗಳು, ಈ ಹಿಂದಿನ ಟೀಸರ್​ಗಳನ್ನೇ ಜೋಡಿಸಿ ನಿರ್ಮಾಪಕ ಮುನಿರತ್ನ ಅವರು ಟ್ರೈಲರ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ದರ್ಶನ್ 50ನೇ ಸಿನಿಮಾ ಹಾಗೂ ಒಂದು ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಎಂಬ ಕಾರಣಕ್ಕೆ ‘ಕುರುಕ್ಷೇತ್ರ’ ಟ್ರೇಲರ್ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೆ, ದರ್ಶನ್ ಅಭಿಮಾನಿಗಳಿಗೆ ಟ್ರೇಲರ್ ನಿರಾಸೆ ಮೂಡಿಸಿದೆ.

ಟ್ರೇಲರ್‌ನಲ್ಲಿ ಅಭಿಮಾನಿಗಳನ್ನು ತೃಪ್ತಿಪಡಿಸುವಲ್ಲಿ ವಿಫಲವಾಗಿದೆ. ಟ್ರೇಲರ್ ಪೂರ್ತಿ ಮುನಿರತ್ನ ಹೆಸರೇ ಕಾಣುತ್ತದೆ ಹೊರತು ಯಾವ ಹೊಸತನವೂ ಕಾಣುವುದಿಲ್ಲ. ನಿರೀಕ್ಷೆ ಹುಟ್ಟಿಸಿದಷ್ಟು ಟ್ರೇಲರ್ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಮೂಡಿದೆ. ಎರಡು ಟೀಸರ್ ಸೇರಿಸಿ ಮಾಡಿರುವ ಟ್ರೇಲರ್ ಇದು ಎಂದು ಟ್ರೋಲ್ ಮಾಡಲಾಗುತ್ತಿದೆ. ಈ ಕಾಮೆಂಟ್‌ಗಳಿಂದ ಬೇಸತ್ತ ಚಿತ್ರತಂಡ ಈಗ ಯೂಟ್ಯೂಬ್ ನಲ್ಲಿ ಕಾಮೆಂಟ್‌ಗಳನ್ನೇ ಡಿಸೇಬಲ್ ಮಾಡಿದೆ.

ಬಿಡುಗಡೆ ಆಗಿರುವ ಟ್ರೇಲರ್ 1 ನಿಮಿಷ 50 ಸೆಕೆಂಡ್ ಇದ್ದು ಅದರಲ್ಲಿ ಸುಮಾರು 1 ನಿಮಿಷ ಮುನಿರತ್ನ ಹಾಗೂ ಪ್ರೊಡಕ್ಷನ್ ಹೌಸ್ ಹೆಸರು ಇದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ಗ್ರಾಫಿಕ್ಸ್ ಬಗ್ಗೆಯು ಅಭಿಮಾನಿಗಳಿಂದ ಅಪಸ್ವರ ಕೇಳಿಬರುತ್ತಿದೆ. ಹೀಗಾಗಿ ಟಿವಿಯಲ್ಲಿ ಬರುವ ಬರವಾಹಿಯೇ ಇದಕ್ಕಿಂತ ಚೆನ್ನಾಗಿರುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top