fbpx
ಸಮಾಚಾರ

ಕೇವಲ 27 ರನ್ ಬಾರಿಸಿದರೆ ವಿಶ್ವಕಪ್ ಇತಿಹಾಸದಲ್ಲೇ ಸರ್ವಶ್ರೇಷ್ಠ ದಾಖಲೆ ನಿರ್ಮಾಣ ಮಾಡಲಿದ್ದಾರೆ ರೋಹಿತ್ ಶರ್ಮ.

ವಿಶ್ವಕಪ್ ಟೂರ್ನಿಯಲ್ಲಿ ಶತಕದ ಮೇಲೆ ಶತಕ ಬಾರಿಸುತ್ತಾ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಇದೀಗ ಮತ್ತೊಂದು ಅಪರೂಪದ ದಾಖಲೆಯ ಹೊಸ್ತಿಲಲ್ಲಿದ್ದು ಕೇವಲ 27 ರನ್ ಬಾರಿಸಿದರೆ ಇನ್ನೊಂದು ವಿಶ್ವದಾಖಲೆಗೆ ಹಿಟ್‌ಮ್ಯಾನ್ ಪಾತ್ರರಾಗಲಿದ್ದಾರೆ.

ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 8 ಪಂದ್ಯಗಳ ಪೈಕಿ 647 ರನ್ ಬಾರಿಸಿದ್ದಾರೆ. ಇನ್ನು 27 ರನ್ ಬಾರಿಸಿದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಸಚಿನ್ 2003ರ ವಿಶ್ವಕಪ್ ಟೂರ್ನಿಯಲ್ಲಿ 11 ಪಂದ್ಯಗಳ ಪೈಕಿ 673 ರನ್ ಬಾರಿಸಿದ್ದರು. ಇನ್ನು 2007ರಲ್ಲಿ ಮ್ಯಾಥ್ಯೂವ್ ಹೇಡನ್ 11 ಪಂದ್ಯ ಪೈಕಿ 659 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ದಿಗ್ಗಜರ ದಾಖಲೆಯನ್ನು ಹಿಂದಿಕ್ಕುವ ಹಾದಿಯಲ್ಲಿ ರೋಹಿತ್ ಶರ್ಮಾ ಇದ್ದಾರೆ.

ರೋಹಿತ್‌ ನ್ಯೂಜಿಲೆಂಡ್‌ ಎದುರು 53 ರನ್‌ ಗಳಿಸಿದರೆ, ವಿಶ್ವಕಪ್‌ನಲ್ಲಿ 700 ರನ್‌ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ವಿಶ್ವಕಪ್‌ ಟೂರ್ನಿಯಲ್ಲಿ ಆರು ಶತಕ ಪೂರೈಸಿರುವ ಅವರು ಮತ್ತೊಂದು ಶತಕ ಸಿಡಿಸಿದರೆ, ಏಳು ಶತಕಗಳ ಸರದಾರನಾಗಿ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ.

ಈಗಾಗಲೇ ಹ್ಯಾಟ್ರಿಕ್‌ ಶತಕ ದಾಖಲೆ ಮಾಡಿರುವ ರೋಹಿತ್ ಶರ್ಮಾ ಮೊತ್ತೊಂದು ಶತಕ ಸಿಡಿಸಿದರೆ, ಸತತ ನಾಲ್ಕು ಶತಕ ಗಳಿಸಿದ ದಾಖಲೆಯನ್ನು ಸರಿಗಟ್ಟಲಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಕುಮಾರ ಸಂಗಕ್ಕಾರ ಸತತ ನಾಲ್ಕು ಶತಕ ಪೂರೈಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top