fbpx
ಮನೋರಂಜನೆ

ಬೆಂಗಳೂರು ಜನರ ಮೇಲೆ ಸಿಟ್ಟಿಗೆದ್ದ ನವರಸ ನಾಯಕ ಜಗ್ಗೇಶ್!

ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಸಭಾ ಚುನಾವಣೆ ಕೊನೆಗೂ ಅಂತ್ಯವಾಗಿದ್ದು ಅದರ ಫಲಿತಾಂಶಕ್ಕಾಗಿ ಅಭ್ಯರ್ಥಿಗಳೆಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆದ್ರೆ ಈ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿಯೇ ಅತಿ ಕಡಿಮೆ ಮಟ್ಟದ ಮತದಾನವಾಗಿದ್ದು ಇದಕ್ಕೆ ನಟ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

 

ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿರುವ ಜಗ್ಗೇಶ್ “ಏನ್ ಓಟ್ ಹಾಕಿದ್ದಾರೆ city ಜನ..
ಶಹಭಾಸ್ ಜೈ ಬೆಂಗಳೂರು ವಾಸಿಗಳೆ
ಏನ್ ಬಧ್ಧತೆ..ಏನ್ ಪ್ರೇಮ..ಏನ್ ಸ್ವಾಭಿಮಾನ..ಅಂತರರಾಷ್ಟ್ರದ ಗುಣಮಟ್ಟ ಬೇಕು. tvಕಂಡರೆ ಸಾಕು ಏನು ವಾದಮಂಡನೆ..ಮೆಚ್ಚಬೇಕು ಬಧ್ಧತೆ..ಹಳ್ಳಿಯಲ್ಲಿ ದುಡ್ಡಿಗೆvote..
Cityಯಲ್ಲಿ boothತಿರುಗಿ ನೋಡಲ್ಲಾ.
ಹೇಗೆ ಬದಲಾವಣೆ..ಯಾರಿಂದ ಬದಲಾವಣೆ..ಯಾಕೆ ಬದಲಾವಣೆ..
ನಗುಬರುತ್ತಿದೆ.” ಎಂದು ಬೇಸರವಾಗಿ ಬರೆದುಕೊಂಡಿದ್ದಾರೆ.

 

 

ಇದರ ಜೊತೆಗೆ ಬೆಂಗಳೂರಿನ ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಶೇಕಡಾ ಮತದಾನ ನಡೆದಿದೆ ಎಂಬ ಅಂಕಿಅಂಶವನ್ನು ಕೂಡ ಶೇರ್ ಮಾಡಿದ್ದಾರೆ.. ಈ ಭಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗ ನಾನಾ ರೀತಿಯ ತಂತ್ರಗಳನ್ನು ರೂಪಿಸಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸಿತ್ತು ಆದರೂ ಬೆಂಗಳೂರು ನಗರದ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟದಿರುವುದು ವಿಷಾದನೀಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top